janadhvani

Kannada Online News Paper

SSF ಮೂಡಬಿದ್ರೆ, SYS ಕೈಕಂಬ : ನೆರೆ ಸಂತ್ರಸ್ತ ಮಕ್ಕಳಿಗೆ ಪುಸ್ತಕ ಬಿಡುಗಡೆ

ಮೂಡಬಿದ್ರೆ: SSF ಮೂಡಬಿದ್ರೆ ಡಿವಿಷನ್ ಹಾಗೂ SYS ಕೈಕಂಬ ಸೆಂಟರ್ ವತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಮಕ್ಕಳಿಗೆ ಸುಮಾರು ರೂ. 2,30,000 ಮೌಲ್ಯದ ಶಾಲಾ ನೋಟ್ ಪುಸ್ತಕ ‌ಹಾಗೂ ರೂ. 2,00,000 ಮೌಲ್ಯದ ಶಾಲಾ ಬ್ಯಾಗ್ ಬಿಡುಗಡೆ ಮಾಡಲಾಯಿತು.

SSF ಮೂಡಬಿದ್ರೆ ಡಿವಿಷನ್ ಹಾಗೂ SჄS ಕೈಕಂಬ ಸೆಂಟರ್ ನಾಯಕರು ಇತ್ತೀಚೆಗೆ ಪ್ರಕ್ರತಿ ವಿಕೋಪದಿಂದ ತತ್ತರಿಸಿದ ಉತ್ತರ ಕರ್ನಾಟಕದ ಬಾಗಲಕೋಟೆಯ ಕಲಾಡಗಿ, ಮುಧೋಳ್,ಮತ್ತು ಬಾದಾಮಿಯ ನೆರೆ ಸಂತ್ರಸ್ತರಿಗೆ ರೂ. 5 ಲಕ್ಷ
ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು, ತಿಂಡಿ ತಿನಿಸುಗಳು, ಔಷಧಿಗಳು ಮತ್ತು ವಿವಿಧ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ.

ಇದೀಗ ಅಲ್ಲಿನ ಶಾಲಾ ಮಕ್ಕಳಿಗೆ ಬೇಕಾಗುವ ಪುಸ್ತಕಗಳು, ಬಟ್ಟೆ ಗಳು, ಆಹಾ ರೋತ್ಪನ್ನಗಳನ್ನು ಸಂಗ್ರಹಿಸಿ, ಅದರಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ದಂಡಿನಪೇಟೆಯ ನೆರೆ ಸಂತ್ರಸ್ತರಿಗೆ ರೂ. 1 ಲಕ್ಷ ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು, ಪುಸ್ತಕಗಳನ್ನು ಹಂಚಿದ್ದಾರೆ.

2 ನೇ ಬಾರಿಗೆ ಉತ್ತರ ಕರ್ನಾಟಕಕ್ಕೆ ತೆರಳಿದ ನಾಯಕರು, ಬೆಳಗಾವಿ ಜಿಲ್ಲೆಯ ರಾಮ್ ದುರ್ಗ ತಾಲೂಕಿನ ಪಢಕೋತಿಗಲ್ಲಿ, ಕಿಲುಬನೂರ್, ನೇಕಾರ್ಪೇಟೆ ಹಾಗೂ ರೋಣ್ಕಲ್ ಕಪ್ಪ ಎಂಬೀ ಗ್ರಾಮದ ನೆರೆ ಸಂತ್ರಸ್ತರಿಗೆ ರೂ. 5 ಲಕ್ಷ
ಮೌಲ್ಯದ ಅಕ್ಕಿ, ಬಟ್ಟೆ ಬರೆಗಳು ಮತ್ತು 1 ರಿಂದ 10 ನೇ ತರಗತಿಯ 1000 ಮಕ್ಕಳಿಗೆ ಶಾಲಾ ಕಿಟ್ ಹಂಚಿದ್ದಾರೆ.

ಇದೀಗ 3 ನೇ ಬಾರಿಗೆ ಉತ್ತರ ಕರ್ನಾಟಕ ಹಾಗೂ ಕೊಡಗಿನ ನೆರೆ ಸಂತ್ರಸ್ತರ ಶಾಲಾ ಮಕ್ಕಳಿಗಾಗಿ ಸುಮಾರು ರೂ. 2,30,000 ಮೌಲ್ಯದ ಶಾಲಾ ನೋಟ್ ಪುಸ್ತಕ ‌ಹಾಗೂ ರೂ. 2,00,000 ಮೌಲ್ಯದ ಶಾಲಾ ಬ್ಯಾಗ್ ಗಳನ್ನು SSF KARNATAKA EDU KIT ಎಂಬ ನಾಮದಲ್ಲಿ ಮುದ್ರಣಗೊಳಿಸಿದ್ದು ಇದರ ಬಿಡುಗಡೆ ಸಮಾರಂಭವು ಕೈಕಂಬದ ಮೆಗಾ ಪ್ಲಾಝಾ ಹಾಲ್ನಲ್ಲಿ ನಡೆಯಿತು. ಮರ್ಕಝ್ ಚೇರ್ಮ್ಯಾನ್ ಬದ್ರುದ್ದೀನ್ ಅಝ್ಹರಿಯವರು SSF KARNATAKA EDU KIT ಅನ್ನು ಮೆಗಾ ಪ್ಲಾಝಾ ಹಾಲ್ ಮಾಲಕರಾದ ಬಶರಿಯಾರವರಿಗೆ ನೀಡುವ ಮೂಲಕ ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪರಿಹಾರದ ಸೂತ್ರಧಾರಿ SSF ಮೂಡಬಿದ್ರೆ ಡಿವಿಶನ್ ಕೋಶಾಧಿಕಾರಿಯೂ ಆದ ನಜೀಬ್ ಕೈಕಂಬ (ಸೆಲೀನ ಟ್ರಾನ್ಸ್ಪೋರ್ಟ್), ಡಿವಿಶನ್ ಅಧ್ಯಕ್ಷರಾದ ರಿಯಾಝ್ ಸಅದಿ ಗುರುಪುರ, ಸಿರಾಜ್ ಎಡಪದವು, ಖಲೀಲ್ ಅಬ್ಬೆಟ್ಟು ಮತ್ತು ಡಿವಿಶನ್ ಕಾರ್ಯಕಾರಿ ಸದಸ್ಯರು ಹಾಗೂ SYS ನಾಯಕರಾದ ಬಶೀರ್ ಎಡಪದವು, ರಝಾಕ್ ಹಾಜಿ ಗಂಜಿಮಠ, ಅಝೀಝ್ ಕೈಕಂಬ, ಶರೀಫಾಕ ಪ್ಲಾಸ್ಟಿಕ್ ಅಡ್ಡೂರು, ಝೈನುದ್ದೀನ್ ಅಡ್ಡೂರು, ಉಮರಬ್ಬ ಅಡ್ಡೂರು, ಜಲೀಲ್ ಅಡ್ಡೂರು, ಶಮೀರ್ ಉಳಾಯಿಬೆಟ್ಟು ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

By:ಮೀಡಿಯಾ ವಿಭಾಗ SSF ಮೂಡಬಿದ್ರೆ ಡಿವಿಶನ್

error: Content is protected !! Not allowed copy content from janadhvani.com