ಶಿವಮೊಗ್ಗ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಕ್ರೀಯ ಕಾರ್ಯಕರ್ತರ ತಂಡ Qteam ಇದರ ಶಿವಮೊಗ್ಗ ಜಿಲ್ಲಾ ಮಟ್ಟದ zakvic ಕಾರ್ಯಕ್ರಮ ಶಿವಮೊಗ್ಗದ ವಾದೀ ಹುದಾದಲ್ಲಿರುವ ಮರ್ಕಝುಸ್ಸಆದ: ದಲ್ಲಿ ಅದ್ದೂರಿಯಾಗಿ ನಡೆಯಿತು.
ಎಸ್ಸೆಸ್ಸೆಫ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಮದನಿ ರವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಮೌಲಾನ ಅಬೂಸುಫ್ಯಾನ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಮಂಗಳೂರು ಕ್ಯು ಟೀಂ ರೂಪುರೇಷೆಗಳು ಹಾಗೂ ಇಶಾರ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ರೆಂಜದಕಟ್ಟೆ, ಉಮರುಲ್ ಫಾರೂಖ್ ಝುಹ್ರಿ ಹೊಸನಗರ, ರಶೀದ್ ಮದನಿ ತೀರ್ಥಹಳ್ಳಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಸಾದಾತ್ ಶಿವಮೊಗ್ಗ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಶಿವಮೊಗ್ಗ ಸ್ವಾಗತಿಸಿ ವಂದಿಸಿದರು.