janadhvani

Kannada Online News Paper

ಅಬುಧಾಬಿ: ಸೂಪರ್ ಮಾರ್ಕೆಟ್‌ಗಳಿಂದ ಮೀನು ಖರೀದಿಸುವವರಿಗೆ ಎಚ್ಚರಿಕೆ

ಅಬುಧಾಬಿ: ಸೂಪರ್ ಮಾರ್ಕೆಟ್‌ಗಳಿಂದ ಮೀನು ಮತ್ತು ಮೀನು ಉತ್ಪನ್ನಗಳನ್ನು ಖರೀದಿಸುವವರಿಗೆ ಅಬುಧಾಬಿ ಕೃಷಿ ಮತ್ತು ಆಹಾರ ಸುರಕ್ಷತಾ ಪ್ರಾಧಿಕಾರವು ಎಚ್ಚರಿಕೆ ನೀಡಿದ್ದು, ಮೀನುಗಳನ್ನು ಶಾಪಿಂಗ್ ನಡೆಸಿದ ಕೊನೆಯಲ್ಲಿ ಮಾತ್ರ ಖರೀದಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಕೃಷಿ ಮತ್ತು ಆಹಾರ ಸುರಕ್ಷತಾ ಪ್ರಾಧಿಕಾರವು ಈ ಕುರಿತು ವಿಡಿಯೋ ತುಣುಕನ್ನು ಕೂಡ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಶಾಪಿಂಗ್‌ನ ಪ್ರಾರಂಭದಲ್ಲಿ ಮೀನು ಖರೀದಿಸುವುದರಿಂದ ಅವು ಹಾನಿಗೊಳಗಾಗಬಹುದು ಮತ್ತು ಸಾಧ್ಯವಾದಷ್ಟು ಕಾಲ ರೆಫ್ರಿಜರೇಟರ್‌ನಲ್ಲಿ ಅವುಗಳನ್ನು ಇಡಬೇಕು ಎಂದು ವೀಡಿಯೊದಲ್ಲಿ ಹೇಳಲಾಗಿದೆ.

ಮೀನುಗಳನ್ನು ಮೊದಲೇ ಖರೀದಿಸಿ ರೆಫ್ರಿಜರೇಟರ್‌ನ ಹೊರಗೆ ಹೆಚ್ಚು ಹೊತ್ತು ಇಡುವುದರಿಂದ ಅದರ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.