janadhvani

Kannada Online News Paper

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯಿಂದ ಅಭಿನಂದನಾ ಕಾರ್ಯಕ್ರಮ

ಜಿದ್ದಾ : ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮ ದಿನಾಂಕ 13/09/2019 ರಂದು ಜಿದ್ದಾ ಶರಫಿಯಾದ ರಾರಾ ಅವಿಸ್ ಅಡಿಟೊರಿಯಂನಲ್ಲಿ ನಡೆಯುತು.

ಸೈಯದ್ ಝಕರಿಯ ತಂಙಳ್ ನಾವುಂದ ರವರ ದುವಾ ದೊಂದಿಗೆ ಆರಂಭವಾದ ಸಭೆಯಲ್ಲಿ, ಸುಲೈಮಾನ್ ಹನೀಫಿಯವರು ಕಿರಾಅತ್ ಪಠಿಸಿದರು, ಉದ್ಘಾಟನೆಯನ್ನು ಜಿದ್ದಾ ಝೊನ್ ಅಧ್ಯಕ್ಷರಾದ ಸಿಎಚ್ ಅಬ್ದುಲ್ಲ ಸಖಾಫಿ ಯವರು ನೆರವೇರಿಸಿದರು.
ಅಧ್ಯಕ್ಷತೆಯನ್ನು ಕೆಸಿಎಫ್ ಸೌದಿಅರೇಬಿಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕೆಸಿಎಫ್ ಅಂತರ್‌ರಾಷ್ಟ್ರೀಯ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜನಾಬ್ ಖಮರುದ್ದೀನ್ ಗೂಡಿನಬಳಿ ಮತ್ತು ಇಹ್ಸಾನ್ ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಅಬೂಬಕ್ಕರ್ ರೈಸ್ಕೊ ಪಡುಬಿದ್ರಿ ಯವರನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ವತಿಯಿಂದ ಶಾಲು ಹೊದಿಸಿ ಅಭಿನಂದಿಸಲಾಯಿತು.

ಕೆಸಿಎಫ್ ಎಚ್‌ವಿಸಿ 2019
ಕಳೆದ 5ವರ್ಷಗಳಿಂದ ಹಜ್ಜಾಜ್‌ಗಳ ಸೇವೆ ಮಾಡುವ ಕೆಸಿಎಫ್ ತಂಡವಾಗಿದೆ ಎಚ್‌ವಿಸಿ ಟೀಂ ಇದರ ಯಶಸ್ವಿಗಾಗಿ ನಿರಂತರವಾಗಿ ಪರಿಶ್ರಮಿಸಿದ ಎಚ್ ವಿ ಸಿ ರಾಷ್ಟ್ರೀಯ ಸಮಿತಿ ಕನ್ವಿನರ್ ಇಬ್ರಾಹಿಂ ಕಿನ್ಯ, ಮತ್ತು ಐದು ಝೋನ್ ‌ಗಳಲ್ಲಿ ಎಚ್‌ವಿಸಿ ಗಾಗಿ ಉತ್ತಮ ಸೇವೆಗೈದ ಶಫೀಖ್ ಕಾಟಿಪಳ್ಳ( ದಮ್ಮಾಮ್), ಮೂಸ ಹಾಜಿ ಕಿನ್ಯಾ( ಜಿದ್ದಾ), ಹನೀಫ್ ಕಣ್ಣೂರು ( ರಿಯಾದ್), ಅಬ್ದುಲ್ ರಜಾಕ್ ಉಳ್ಳಾಲ್ ( ಮದೀನತುಲ್ ಮುನವ್ವರ)
ಅಬ್ದುಲ್ ಜಬ್ಬಾರ್ ( ಅಲ್ ಗಸೀಮ್)
ರವರನ್ನು ಅಭಿನಂದಿಸಲಾಯಿತು.

ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಕಾರ್ಯದರ್ಶಿ ಬಶೀರ್ ತಲಪಾಡಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹಿಂ ಕಿನ್ಯ ವಂದಿಸಿದರು.