janadhvani

Kannada Online News Paper

ನವ ಇತಿಹಾಸಕ್ಕೆ ನಾಂದಿ ಹಾಡಿದ ಅಬುಧಾಬಿ ಕೆ‌.ಸಿ‌.ಎಫ್. “ಮೀಟ್ ಎನ್ ಗ್ರೇಟ್” ವಿಶಿಷ್ಟ ಕಾರ್ಯಕ್ರಮ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್.ಅಬುದಾಬಿ ಝೋನ್ ಸಮೀತಿ ವತಿಯಿಂದ ಕೆ.ಸಿ.ಎಫ್ ನ ಚರಿತ್ರೆಯಲ್ಲಿಯೆ ಪ್ರಪ್ರಥಮ ಬಾರಿಗೆ ನೂತನ ವಾಗಿ ಆಯ್ಕೆ ಗೊಂಡತಹ ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮಿತಿ ಮತ್ತು ಎಲ್ಲಾ ಝೋನ್ ಸಮೀತಿ ಪದಾಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ”ಮೀಟ್ ದ ಗ್ರೇಟ್”ಎಂಬ ಶಿರ್ಷಿಕೆ ಯಲ್ಲಿ ದಿನಾಂಕ.06.09.2019 ನೇ ಶುಕ್ರವಾರ ಮಧ್ಯಾಹ್ನ. 2 ಕ್ಕೆ ಅಬುಧಾಬಿ ಲುಲು ಪಾರ್ಟಿ ಹಾಲ್ ನಲ್ಲಿ ಜರುಗಿತು.

ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಹಸ್ಯೆನಾರ್ ಅಮಾನಿ ಅಜ್ಜಾವರ ವಹಿಸಿದ್ದರು.ದಾರುಲ್ ಅಶ್ಆರಿಯ್ಯ ಮ್ಯಾನೇಜರ್ ಮುಹಮ್ಮದಲಿ ಸಖಾಫಿ ಸುರಿಬೈಲ್ ಉದ್ಘಾಟಿಸಿದರು.

ಕೆ.ಸಿ‌.ಎಫ್‌.ಐ.ಎನ್‌.ಸಿ.ನಾಯಕರಾದ ಹಮೀದ್ ಸಅದಿ ಈಶ್ವರ ಮಂಗಳ ,ಪಿ‌.ಎಂ.ಎಚ್‌.ಈಶ್ವರ ಮಂಗಳ, ರಾಷ್ಟ್ರೀಯ ಸಮಿತಿ ನಾಯಕರಾದ ಜಲೀಲ್ ನಿಝಾಮಿ,ಮೂಸ ಬಸರ,ಆಶಂಶ ಮಾತುಗಳನ್ನಾಡಿದರು.ದುಬೈ ನೊರ್ತ್, ದುಬೈ ಸೌತ್, ಶಾರ್ಜಾ, ಅಜ್ಮಾನ್, ಅಲ್ ಐನ್,ರಾಸಲ್ ಖೈಮ ಝೋನ್ ಪದಾಧಿಕಾರಿಗಳಿಗಳು ಮುಖ್ಯ ವಿಶಿಷ್ಟ ಅತಿಥಿಗಳಾಗಿ ಭಾಗವಹಿಸಿದ್ದರು.

ಇಬ್ರಾಹಿಂ ಬ್ರೈಟ್ ಮಾರ್ಬಲ್ ಸ್ವಾಗತಿಸಿ ಕಬೀರ್ ಬಾಯಂಬಾಡಿ ವಂದಿಸಿದರು.ಹಫೀಳ್ ಸಯೀದ್ ಹನೀಫಿ ಕಾರ್ಯ ಕ್ರಮ ನಿರೂಪಿಸಿದರು.