ಜಿದ್ದಾ: ಜೋರ್ಡಾನ್ ಕಣಿವೆ ಮತ್ತು ಮೃತ ಸಮುದ್ರವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಇಸ್ರೇಲ್ ಪ್ರಧಾನ ಮಂತ್ರಿ ಘೋಷಿಸಿದ ಬೆನ್ನಲ್ಲೇ ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟವು ತುರ್ತು ಸಭೆ ಕರೆದಿದ್ದು, ಜಿದ್ದಾದಲ್ಲಿ ವಿದೇಶಾಂಗ ಸಚಿವರ ಶೃಂಗಸಭೆ ನಡೆಯಿತು. ಇಸ್ರೇಲ್ ವಿರುದ್ಧದ ನಿಲುವನ್ನು ಬಿಗಿಗೊಳಿಸಲು ಮತ್ತು ಸಮರ್ಥವಾಗಿ ಪ್ರತಿರೋಧಿಸಲು ಸಭೆ ನಿರ್ಧರಿಸಿತು
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಾನು ಚುನಾವಣೆಯಲ್ಲಿ ಗೆದ್ದರೆ ಜೋರ್ಡಾನ್ ಕಣಿವೆ ಮತ್ತು ಮೃತ ಸಮುದ್ರದ ಪ್ರದೇಶಗಳನ್ನು ಇಸ್ರೇಲ್‌ಗೆ ಸೇರಿಸಲಾಗುವುದು ಎಂದು ಘೋಷಿಸಿದ್ದರು. ಇದರ ವಿರುದ್ದ ಸೌದಿಯು ಇಸ್ಲಾಮಿಕ್ ರಾಷ್ಟ್ರಗಳ ತುರ್ತು ಶೃಂಗಸಭೆಯನ್ನು ಕರೆದಿದೆ. 65,000 ಪ್ಯಾಲೆಸ್ತೀನಿಯನ್ ನಾಗರಿಕರು ವಾಸವಿರುವ ವಲಯದ ಮೇಲೆ ಆಕ್ರಮಣ ಮಾಡಲು ಇಸ್ರೇಲ್ ನಡೆಸುವ ಪ್ರಯತ್ನವನ್ನು ಎದುರಿಸಲು ಸಭೆ ನಿರ್ಧರಿಸಿತು.
ಕೆಲವು ದೇಶಗಳು ಈಗಾಗಲೇ ಇಸ್ರೇಲ್ ಜೊತೆ ಶಾಂತಿ ಮಾತುಕತೆ ನಡೆಸಿವೆ. ಹೊಸ ಪರಿಸ್ಥಿತಿಯಲ್ಲಿ ಇಸ್ರೇಲ್ ವಿರುದ್ಧದ ತನ್ನ ನಿಲುವನ್ನು ಮರುಪರಿಶೀಲಿಸಿತು. ವಿದೇಶಾಂಗ ಸಚಿವರ ಸಭೆಯಲ್ಲಿನ ನಿಲುವನ್ನು ಆಡಳಿತ ಮುಖಂಡರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.