janadhvani

Kannada Online News Paper

ಎಸ್ಸೆಸ್ಸೆಫ್ ಗೂನಡ್ಕ : ಶ್ರೀ ಶಾರದಾ ಅನುದಾನಿತ ಶಾಲೆಯಲ್ಲಿ ಸ್ವಯಂಪ್ರೇರಿತ ಸೇವೆ

ಸುಳ್ಯ: ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ನ ಅಧೀನದಲ್ಲಿ ಸಾಂತ್ವನ ಟೀಂ ಕಾರ್ಯಾಚರಿಸುತ್ತಿದ್ದು ಹಲವಾರು ಸ್ವಯಂ ಸೇವೆಗಳನ್ನು ಮಾಡುತ್ತಾ ಜನಮನ್ನಣೆಯನ್ನು ಪಡೆಯುತ್ತಿದೆ.ಸುಳ್ಯ ತಹಶೀಲ್ದಾರ್ ರವರು ಪ್ರಸ್ತುತ ಕಾರ್ಯಕರ್ತರನ್ನು ಹುರಿದುಂಬಿಸಿ ಪ್ರೋತ್ಸಾಹಿಸುತ್ತಿದ್ದಾರೆ.

ಇದೀಗ ಎಸ್ಸೆಸ್ಸೆಫ್ ನವರ ಕಾರ್ಯಾಚರಣೆಯು ಗೂನಡ್ಕದ ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆಗೂ ವ್ಯಾಪಿಸಿ ಅಲ್ಲಿನ ಹೊಸತಾಗಿ ನಿರ್ಮಾಣಗೊಂಡ ಕಟ್ಟಡದ ಪೈಂಟಿಂಗನ್ನು ಎಸ್ಸೆಸ್ಸೆಫ್ ಗೂನಡ್ಕ ಶಾಖೆಯ ಕಾರ್ಯಕರ್ತರ ಸಹಕಾರದೊಂದಿಗೆ ನಡೆಸುತ್ತಿದ್ದಾರೆ. ಇದಕ್ಕೆ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಮಂಡಳಿಯವರು ಸಂತೋಷಪೂರ್ವಕವಾಗಿ ಸಹಕರಿಸಿ, ಸೇವೆಯನ್ನು ಶ್ಲಾಘಿಸಿದ್ದಾರೆ.