ಬ್ರಹ್ಮಾವರ: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಇತ್ತೀಚೆಗೆ ಬ್ರಹ್ಮಾವರದಲ್ಲಿ ಹಳೆ ಬೇರು, ಹೊಸ ಚಿಗುರು ಎಂಬ ಸಮ್ಮಿಲನಾ ಕ್ಯಾಂಪ್ ಡಿವಿಷನ್ ಅಧ್ಯಕ್ಷರಾದ ಸೈಯದ್ ಯೂಸುಪ್ ತಂಘಲ್ ಹೂಡೆ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿವಿಷನ್ ಗೌರವ ಸಲಹೆಗಾರರಾದ ಸುಬುಹಾನ್ ಹೊನ್ನಾಳ, ಸಮದ್ ಮದನಿ ಸಾಸ್ತಾನ ಇವರು ಮಾತನಾಡಿದರು. ಭದ್ರಗಿರಿ ಮಸೀದಿ ಖತೀಬರಾದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ದುವಾ ಮಾಡಿದರು. ಡಿವಿಷನ್ ಗೌರವ ಸಲಹೆಗಾರರ ರಶೀದ್ ಉಸ್ತಾದ್ ಕಟಪಾಡಿ ಉದ್ಘಾಟಿಸಿದರು.
ಡಿವಿಷನ್ ಪ್ರ.ಕಾರ್ಯದರ್ಶಿ ಸಿದ್ದೀಕ್ ಅಂಬಾಗಿಲು ಸ್ವಾಗತಿಸಿದರು, ಕಾರ್ಯದರ್ಶಿ ಇಬ್ರಾಹಿಂ ರಂಗನಕೆರೆ ವಂದಿಸಿದರು. ಈ ಸಂದರ್ಭದಲ್ಲಿ ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ, ಉಪಾಧ್ಯಕ್ಷ ಮಜೀದ್ ಕಟಪಾಡಿ, ಕಾರ್ಯದರ್ಶಿ ನವಾಝ್ ಉಡುಪಿ,ಕ್ಯಾಂಪಸ್ ಕಾರ್ಯದರ್ಶಿ ಶಿಹಾಬ್ ಬಾರ್ಕೂರ್, ಜಿಲ್ಲಾ ಕಾರ್ಯದರ್ಶಿ ನಾಸೀರ್ ಭದ್ರಗಿರಿ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಆಸೀಪ್ ಸರಕಾರಿಗುಡ್ಡೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ಶಾಹುಲ್ ದೊಡ್ಡಣಗುಡ್ಡೆ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದಿನ್ ರಂಗನಕೆರೆ ಹಾಗೂ ಇನ್ನಿತರ ನಾಯಕರು ಉಪಸ್ಥಿತಿ ಇದ್ದರು.