ರಿಯಾದ್: ಅಲ್ ಮದೀನ ಮಂಜನಾಡಿ ಇದರ ಸೌದಿ ಅರೇಬಿಯಾದ ರಾಷ್ಟ್ರೀಯ ಸಮಿತಿ ಅಧೀನದಲ್ಲಿ ನೂತನ ದೀರ ಸಮಿತಿಯನ್ನು ದಿನಾಂಕ 6-9-2019 ದಂದು ಇಬ್ರಾಹಿಂ ಮಂಜನಾಡಿ ರವರ ನಿವಾಸದಲ್ಲಿ ರಚಿಸಲಾಯಿತು.
ಸಭೆಯಯ ಅಧ್ಯಕ್ಷತೆಯನ್ನು ಅಲ್ ಮದೀನ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಎನ್ ಎಸ್ ಅಬ್ದುಲ್ಲಾ ಹಾಜಿ ವಹಿಸಿದರು. ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಮದನಿ ಮಂಜನಾಡಿ ಸ್ವಾಗತಿಸಿದರು. ಕೆ. ಸಿ.ಎಫ್ ರಿಯಾದ್ ಝೋನಲ್ ಅಧ್ಯಕ್ಷರಾದ ಫಾರೂಕ್ ಸಅದಿ ಉದ್ಘಾಟಿಸಿದರು.
ಮುಖ್ಯ ಪ್ರಭಾಷಕರಾಗಿ ಕೆ. ಸಿ.ಎಫ್ ನ್ಯಾಷನಲ್ ಸಮಿತಿ ಆರ್ಗನೈಝರ್ ಚೇರ್ಮಾನ್ ಸಿದ್ದೀಕ್ ಸಖಾಫಿ ಪೆರುವಾಯಿ ಮಾತನಾಡಿ ಸಂಸ್ಥೆಯ ಶಿಲ್ಪಿ ಅಬ್ಬಾಸ್ ಉಸ್ತಾದರ ಜೀವನ ಶೈಲಿಯನ್ನು ವಿವರಿಸಿದರು.ಸಭೆಯಲ್ಲಿ ಹಲವು ಉಲಮಾ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ನೂತನ ಸಮಿತಿಯ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.ಕಾರ್ಯಕ್ರಮದ ಕೊನೆಯಲ್ಲಿ ಪ್ರದಾನ ಕಾರ್ಯದರ್ಶಿ ಧನ್ಯವಾದ ಅರ್ಪಿಸಿದರು.
ವರದಿ : ಇಕ್ಬಾಲ್ ಮಲ್ಲೂರು