janadhvani

Kannada Online News Paper

ಉಪ್ಪಿನಂಗಡಿ: ಬ್ಲಡ್ ಡೊನರ್ಸ್ ಮಂಗಳೂರು ಇದರ 200 ನೇ ರಕ್ತದಾನ ಶಿಬಿರ ಯಶಸ್ವಿ

ಉಪ್ಪಿನಂಗಡಿ: ಬ್ಲಡ್ ಡೋನರ್ಸ್ ಮಂಗಳೂರು ತಂಡದ ಇನ್ನೂರನೆ ರಕ್ತದಾನ ಶಿಬಿರ ಬಹಳ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಉಪ್ಪಿನಂಗಡಿಯ ಪೃಥ್ವಿ ಕಾಂಪ್ಲೆಕ್ಸ್ ಬಳಿ ಇಂದು ಜರುಗಿತು.

ಉಬರ್ ಡೋನರ್ಸ್ ಉಪ್ಪಿನಂಗಡಿ, ಮಂಬಾಹು ರಹ್ಮ ಚಾರಿಟೇಬಲ್ ಟ್ರಸ್ಟ್ ರಿ, ಐ ಎಮ್ ಡಬ್ಲ್ಯು ಎ ಪೆರಿಯಡ್ಕ, ಸಿಲ್ವರ್ ಸ್ಪೂನ್ ಕ್ಯಾಟರರ್ಸ್, ಎಜೆ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೆಳಿಗ್ಗೆ 9:00 ಗೆ ಆರಂಭಗೊಂಡು ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಿತು.

ನಝೀರ್ ಅಝ್ಹರಿ ಬೋಲ್ಮಿನಾರ್ ಕಾರ್ಯಕ್ರಮವನ್ನು ದುಆ ದೊಂದಿಗೆ ಉದ್ಘಾಟಿಸಿ, ನಂತರ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ರಕ್ತದಾನ ಮಹಾದಾನ ವಾಗಿದ್ದು ಈ ಸೌಹಾರ್ದ ಸಮಾನ ಮನಸ್ಕ ದಾನವು ಉತ್ತಮ ಸಮಾಜ ಸೇವೆಯಾಗಿದ್ದು, ಸಮಾಜಕ್ಕೆ ಮಾದರಿ ಎಂದು ಹೇಳಿದರು.

ನಂತರ ಉಪ್ಪಿನಂಗಡಿಯ ಡಾಕ್ಟರ್ ನಿರಂಜನ್ ರೈ ಮಾತನಾಡಿ ಅವಶ್ಯಕ ಸಮಯದಲ್ಲಿ ರೋಗಿಗೆ ಸ್ಪಂದಿಸುವ ತಂಡಗಳಲ್ಲಿ ಸೇವೆಗೈಯುವ ಯುವಕರನ್ನು ಅಭಿನಂದಿಸಿದರು. ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಅವರು ಬ್ಲಡ್ ಡೋನರ್ಸ್ ಮಂಗಳೂರು ರಿ ತಂಡದ ಬಗ್ಗೆ ಮಾತನಾಡಿ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಕೇವಲ ರಕ್ತ ದಾನ ಮಾತ್ರ ಅಲ್ಲದೆ ತಮ್ಮ ಕೈಲಾದ ಯಾವ ಸೇವೆಯಲ್ಲೆಲ್ಲಾ ತೊಡಗಿಸಬಹುದು ಆ ಕ್ಷೇತ್ರಗಳನ್ನು ಸಂಪೂರ್ಣವಾಗಿ ಆವರಿಸುವ ಈ ತಂಡದ ಕಾರ್ಯ ನಿಜಕ್ಕೂ ಅದ್ಭುತ ಎನ್ನುವ ಮೂಲಕ ತಂಡದ ಸದಸ್ಯರನ್ನು ಹುರಿದುಂಬಿಸಿದರು. ನಂತರ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಕಾರ್ಯನಿರ್ವಾಹಕ ಶಾಕಿರ್ ಹಕ್ ನೆಲ್ಯಾಡಿ ಮಾತನಾಡಿದರು

ಕಾರ್ಯಕ್ರಮದ ಅಧ್ಯಕ್ಷರಾದ ಮುಸ್ತಫಾ ಕೆಂಪಿ ಮಾತನಾಡಿ ಉಪ್ಪಿನಂಗಡಿಯ ಯುವಕರು ಮಾನವೀಯತೆಯುಳ್ಳವರು ಈ ರೀತಿಯ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಳ್ಳುವುದು ನಿಜಕ್ಕೂ ಅಭಿನಂದನಾರ್ಹ ಎಂದು ಹೇಳಿದರು.

ವೇದಿಕೆಯಲ್ಲಿ ತೌಸಿಫ್ ಯು ಟಿ, ಅಶ್ರಫ್ ಐ ಮೈಸೂರು, ನಝೀರ್ ಮಠ, ಹಾರೂನ್ ಅಗ್ನಾಡಿ, ತಾಹಿರ್ ಸಾಲ್ಮರ ಮುಸ್ತಫಾ ಪಿ.ಎಚ್, ಡಾ ಗೋಪಾಲಕೃಷ್ಣ, ಬಶೀರ್ ಕೆ.ಪಿ, ಜ ಉಮರ್, ಶಬೀರ್ ಕೆಂಪಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ, ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪ್ಪಿನಂಗಡಿಯ ಕೀರ್ತಿ ಪತಾಕೆಯನ್ನು ಹಾರಿಸಿದ ಅಮಾನ್, ಅನುಚೇತ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು. ಅದಲ್ಲದೆ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಸಮಾಜಸೇವಕ ನಜೀರ್ ಹಂಡೇಲ್ ಇವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ಉಪ್ಪಿನಂಗಡಿಯ ನೆರೆ ಸಂದರ್ಭ ತುರ್ತು ಸೇವೆಗೈದ ಉಪ್ಪಿನಂಗಡಿಯ ಗೃಹರಕ್ಷಕದಳ, ಫಿ ಎಫ್ ಐ ರೆಸ್ಕ್ಯು, ಎಸ್ ಕೆ ಎಸ್ ಎಸ್ ಎಫ್ ವಿಕಾಯ, ಎಸ್ ವೈ ಎಸ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮರ್ಹೂಂ ನಿಜಾಮುದ್ದೀನ್ ಕೆಂಪಿ ಇವರ ಸ್ಮರಣಾರ್ಥವಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದು ಸುಮಾರು 101 ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
250 ಜನರಿಂದ ರಕ್ತದಾನ ಮಾಡುವುದಾಗಿ ನೊಂದಾಯಿಸಿದ್ದರೂ, ಕಾರಣಾಂತರಗಳಿಂದ ನೂರು ದಾನಿಗಳಿಗೆ ಮಾತ್ರ ರಕ್ತ ಕೊಡುವ ವ್ಯವಸ್ಥೆಯಿರುವುದರಿಂದ ಉಳಿದ ದಾನಿಗಳು ಮುಂದಿನ ದಿನಗಳಲ್ಲಿ ರಕ್ತ ಕೊಡುವುದಾಗಿ ಘೋಷಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರು ಹಿರಿಯ ನಾಗರಿಕರು ವರ್ತಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದ ಲೆತೀಫ್ ಎಚ್ ಎಸ್ ಎ, ಇಮ್ರಾನ್ ಇಮ್ಮಿ ಉಪ್ಪಿನಂಗಡಿ, ಸಿದ್ದೀಕ್ ಹ್ಯಾಪಿ ಟೈಂ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ರಜಾಕ್ ಸಾಲ್ಮರ ಸ್ವಾಗತಿಸಿ, ವಂದಿಸಿದರು. ಗಝ್ಝಾಲಿ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ : ಬ್ಲಡ್ ಡೋನರ್ಸ್ ಮಂಗಳೂರು ®

error: Content is protected !! Not allowed copy content from janadhvani.com