janadhvani

Kannada Online News Paper

ಕುವೈತ್: ಆಶ್ರಿತ ವೀಸಾ ಲಭಿಸಲು ಕನಿಷ್ಠ ವೇತನ 500 ದಿನಾರ್‌

ಕುವೈತ್ ಸಿಟಿ: ಅವಲಂಬಿತ ವೀಸಾ ಪಡೆಯುವವರಿಗೆ ಇರಬೇಕಾದ ಕನಿಷ್ಠ ವೇತನವನ್ನು 500 ದಿನಾರ್‌ಗೆ ಏರಿಸಲಾಗಿದೆ. ಈ ಮೊದಲು, ವಿದೇಶಿಯರು ಕುಟುಂಬವನ್ನು ಪ್ರಾಯೋಜಿಸಲು ಕನಿಷ್ಠ ವೇತನ ಮಿತಿ 450 ದಿನಾರ್ ಆಗಿತ್ತು.

ನರ್ಸ್‌ಗಳು ಸೇರಿದಂತೆ ಹದಿನಾಲ್ಕು ವೃತ್ತಿಗಳಿಗೆ ಸಂಬಳ ಗಡುವಿನಿಂದ ವಿನಾಯಿತಿ ನೀಡಲಾಗಿದೆ. ಗೃಹ ಸಚಿವ ಶೈಖ್ ಖಾಲಿದ್ ಅಲ್-ಜರಾಹ್, ವೇತನ ಮಿತಿಯನ್ನು ಹೆಚ್ಚಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದಾರೆ. ಪ್ರಸ್ತುತ ಅವಲಂಬಿತ ವೀಸಾಗಳಲ್ಲಿ ವಾಸಿಸುವವರಿಗೆ ವಸತಿ ದಾಖಲೆ ನವೀಕರಣಕ್ಕೂ ಹೊಸ ಮಿತಿ ಅನ್ವಯಿಸುತ್ತದೆ.

ಆದರೆ, ನಿವಾಸ ಇಲಾಖೆಯ ಮುಖ್ಯಸ್ಥರು ಅರ್ಜಿಯನ್ನು ನವೀಕರಿಸುವ ಅಥವಾ ನಿರಾಕರಿಸುವ ವಿವೇಚನೆಯನ್ನು ಹೊಂದಿರುತ್ತಾರೆ. ವೈದ್ಯ, ಇಂಜಿನಿಯರ್, ಸರ್ಕಾರಿ ಸಲಹೆಗಾರ, ನ್ಯಾಯಾಧೀಶರು, ಪ್ರಾಸಿಕ್ಯೂಟರ್, ಕಾನೂನು ಸಂಶೋಧಕರು, ಕಾನೂನು ಸಂಶೋಧಕರು, ಫಾರ್ಮಸಿಸ್ಟ್, ಪ್ರಾಧ್ಯಾಪಕರು, ಪ್ರಾಂಶುಪಾಲರು, ಶಿಕ್ಷಣ ನಿರ್ದೇಶಕರು, ಶಿಕ್ಷಕರು, ಮಸೀದಿ ಇಮಾಮ್, ಖತೀಬ್, ಆಝಾನ್ ಕರೆ ನೀಡುವವರು, ಗ್ರಂಥಪಾಲಕರು, ಶುಶ್ರೂಷಾ ಅಥಾರಿಟಿ ಸ್ಟಾಫ್, ದಾದಿಯರು, ಮೆಡಿಕಲ್ ತಂತ್ರಜ್ಞರು, ಪೈಲಟ್, ಸೇರಿದಂತೆ ಹದಿನಾಲ್ಕು ಹುದ್ದೆಗಳಿಗೆ ಸಂಬಳ ಮಿತಿಯಿಂದ ವಿನಾಯಿತಿ ನೀಡಲಾಗಿದೆ.

ಇದಲ್ಲದೆ, ಕುರ್‌ಆನ್ ಕಂಠಪಾಠ ಮಾಡಿದವರು, ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ವಲಯದ ಮನಶ್ಶಾಸ್ತ್ರಜ್ಞರು, ಪತ್ರಕರ್ತರು, ಕ್ರೀಡಾ ತರಬೇತುದಾರರು, ಕ್ರೀಡಾಪಟುಗಳು ಮತ್ತು ಸ್ಮಶಾನಗಳಲ್ಲಿರುವ ಸಿಬ್ಬಂದಿಗೆ ವಿನಾಯಿತಿ ನೀಡಲಾಗುತ್ತದೆ. ಈ ವಿಭಾಗವರಿಗೆ 500 ದಿನಾರ್‌ಗಿಂತ ಕಡಿಮೆ ಸಂಬಳ ಇದ್ದರೂ ಕುಟುಂಬವನ್ನು ಕರೆತರ ಬಹುದಾಗಿದೆ.