janadhvani

Kannada Online News Paper

ಮನ್ ಶರ್: ಮಿಲ್ಕಾಸ್ ಡೈರಿ ಫಾರಂ- ಖುರ್ರತುಸ್ಸಾದಾತ್ ಕೂರತ್ ತಂಙಳ್ ರಿಂದ ವಿಧ್ಯುಕ್ತ ಚಾಲನೆ

ಬೆಳ್ತಂಗಡಿ: ಮನ್ ಶರ್ ಆಗ್ರೋ ಪ್ರೊಡೆಕ್ಟ್ಸ್ ಪ್ರೈವೆಟ್ ಲಿಮಿಟೆಡ್ ಇದರ ಅಧೀನದಲ್ಲಿ ಬೆಳ್ತಂಗಡಿಯ ಪಡಂಗಡಿ ಗ್ರಾಮ ವ್ಯಾಪ್ತಿಯಲ್ಲಿ ಆರಂಭಿಸುವ ಮಿಲ್ಕಾಸ್ ಡೈರಿ ಫಾರಂನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಲ್ ಕೂರಾ ಉಧ್ಘಾಟಿಸಿ ಆಶಿರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮನ್ ಶರ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೆಯರ್ಮ್ಯಾನ್ ಸಯ್ಯದ್ ಉಮರ್ ಅಸ್ಸಖಾಫ್ ತಂಙಲ್ ವಹಿಸಿದರು. ಸಮಾರಂಭವನ್ನು ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಾಜಿ ಶೇಖ್ ಬಾವಾ ಅಬುಧಾಬಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಸಿ.ಟಿ.ಎಂ ಸಲೀಂ ತಂಙಲ್ ,ಶರೀಫ್ ಸಖಾಫಿ ನೆಲ್ಯಾಡಿ, ಶಂಸುದ್ದೀನ್ ದಾರಿಮಿ ಕನ್ನಡಿಕಟ್ಟೆ, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಹಂಝ ಮದನಿ ಕೆ.ವೈ, ಬಿ.ಎ ನಝೀರ್ ಬೆಳ್ತಂಗಡಿ, ಗ್ರೂಪ್ ಸಿ.ಎ ಶ್ರೀನಿವಾಸ್ ಪಾಲಕ್ಕಾಡ್, ಕಂಪೆನಿ ಸೆಕ್ರೆಟರಿ ನಈಮ್ ಎರ್ನಾಕುಲಂ, ಇಂಜಿನಿಯರ್ ಮುಹಮ್ಮದ್ ಮಂಗಳೂರು, ಯೂಸುಫ್ ಕಮಾಲ್, ಎಮ್ ಕೆ ಬದ್ರುದ್ದೀನ್, ಎ.ಕೆ ಅಹ್ಮದ್, ಅಬ್ಬೋನು ಶಾಫಿ ಪಲ್ಲಾಜೆ, ಯೂಸುಪ್ ಕನ್ನಾಡಿಕಟ್ಟೆ, ಮುಹಮ್ಮದ್ ರಫಿ ಬೆಳ್ತಂಗಡಿ, ಅಬೂಬಕ್ಕರ್ ಹಾಜಿ ಪರಪ್ಪು, ರಾಝಿಯುಧ್ಧೀನ್ ಸಬರಬೈಲ್, ಅಲ್ತಾಫ್ ಕುಂಪಲ, ಹಸೈನಾರ್ ಸಕಲೇಶಪುರ ಮೊದಲಾದವರು ಉಪಸ್ಥಿತರಿದ್ದರು.

ದೇಶೀಯ ಹಾಗೂ ಉತ್ಕೃಷ್ಟ ವಾದ ಪಶುಗಳನ್ನು ಪಾಲನೆ ಮಾಡಿ ಅದರಿಂದ ಲಭ್ಯವಾಗುವ ಹಾಲನ್ನು ತಾಜಾರೂಪದಲ್ಲಿ ಗ್ರಾಹಕರಿಗೆ ತಲುಪಿಸುವ ವಿಶೇಷ ವ್ಯವಸ್ಥೆಯನ್ನು ಮಿಲ್ಕಾಸ್ ಡೈರಿ ಫಾರಂ ಹೊಂದಿದ್ದು ಅತಿ ಶೀಘ್ರವಾಗಿ ಇದು ಕಾರ್ಯಾರಂಭ ಮಾಡಲಿದೆ.

ಕಾರ್ಯಕ್ರಮವನ್ನು ಗ್ರೂಪ್ ಡೈರಕ್ಟರ್ ಗಳಾದ ಸಯ್ಯದ್ ಆಬಿದ್ ಅಸ್ಸಖಾಫ್ ಸಂಯೋಜಿಸಿ ಎಮ್ ಬಿ ಸ್ವಾಧಿಕ್ ಮಾಸ್ಟರ್ ಮಲೆಬೆಟ್ಟು ಸ್ವಾಗತಿಸಿ ನಿರೂಪಿಸಿದರು.

ಕಾರ್ಯಕ್ರಮದ ಡೈರಿ ಫಾರಂನ ವಿವಿಧ ಕೆಲಸಗಳ ಗುತ್ತಿಗೆದಾರರನ್ನು ಮತ್ತು ಕೆ.ಸಿ ಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹಾಜಿ ಶೇಖ್ ಬಾವಾ ರನ್ನು ಸನ್ಮಾನಿಸಲಾಯಿತು.

error: Content is protected !! Not allowed copy content from janadhvani.com