ದುಬೈ: ಕಾನೂನು ಉಲ್ಲಂಘಿಸದವರಿಗಾಗಿ ದುಬೈ ಪೊಲೀಸರು ಜಾರಿಗೆ ತಂದ ಯೋಜನೆಯ ಮೂಲಕ 42,5371 ಮಂದಿಗೆ ದಂಡದಲ್ಲಿ 50 ಶೇಕಡಾ ವಿನಾಯಿತಿ ಲಭಿಸಿದೆ. ಈ ಪೈಕಿ 340,112 ಪುರುಷ ಚಾಲಕರು ಮತ್ತು 85,259 ಮಹಿಳೆಯರು ಎಂದು ಪೊಲೀಸರು ತಿಳಿಸಿದ್ದಾರೆ. ಸುರಕ್ಷಿತ ವಾಹನ ಚಾಲನೆಗಾಗಿ ಜಾರಿಗೆ ತರಲಾದ ಈ ಯೋಜನೆಯ ಎರಡನೇ ಹಂತವನ್ನು ದುಬೈ ಪೊಲೀಸರ ಸ್ಮಾರ್ಟ್ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಪ್ರಾರಂಬಿಸಲಾಗಿದೆ.
ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಫೆ.6 ರಿಂದ ಮೂರು ತಿಂಗಳ ಕಾಲ ಕಾನೂನು ಉಲ್ಲಂಘಿಸದವರಿಗೆ 25 ಶೇ. ಮತ್ತು ಆರು ತಿಂಗಳ ಕಾಲ ಉಲ್ಲಂಘನೆ ಮಾಡದವರಿಗೆ 50 ಶೇ. ದಂಡ ವಿನಾಯಿತಿ ಲಭಿಸಬಹುದಾಗಿದೆ. ಒಂಬತ್ತು ತಿಂಗಳು ಉಲ್ಲಂಘನೆ ಮಾಡದವರಿಗೆ ಶೇಕಡಾ 75 ಮತ್ತು ಒಂದು ವರ್ಷ ಯಾವುದೇ ಟ್ರಾಫಿಕ್ ಕಾನೂನು ಮೀರದವರಿಗೆ ನೂರು ಶೇಕಡಾ ವಿನಾಯಿತಿ ಲಭಿಸಲಿದೆ.