janadhvani

Kannada Online News Paper

ಮಸ್ಜಿದುಲ್ ಅಖ್ಸಾಗೆ ಕ್ರಿಶ್ಚಿಯನ್ ಉಗ್ರ ಬೆಂಕಿ ಇಟ್ಟ ಕರಾಳ ದಿನಕ್ಕೆ 50 ವರ್ಷ

ಜೆರುಸಲೇಂ: ಖುದ್ಸ್ ನಗರವು ರಾಜಧಾನಿಯಾಗಿ ಫಲಸ್ತೀನನ್ನು ಮರಳಿ ಪಡೆಯುವವರೆಗೂ ಪೆಲಸ್ತೀನ್‌ಗೆ ನೀಡಲಾಗುವ ನೆರವು ಮುಂದುವರಿಯಲಿದೆ ಎಂದು ಎಂದು ಇಸ್ಲಾಮಿಕ್ ದೇಶಗಳ ಒಕ್ಕೂಟ ಮತ್ತೊಮ್ಮೆ ಪ್ರಕಟಿಸಿದೆ. ಮಸ್ಜಿದುಲ್ ಅಖ್ಸಾಕೆ ಬೆಂಕಿಯಿಟ್ಟ 50 ನೇ ವಾರ್ಷಿಕದಂದು ಹೊರಡಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶದ ಧಾರ್ಮಿಕ ಚಿಹ್ನೆಗಳು ರಕ್ಷಿಸಲ್ಪಡಬೇಕು ಎಂದು ಒಐಸಿ ಒತ್ತಾಯಿಸಿದೆ.

1969ರ ಆಗಸ್ಟ್ 21ರಂದು, ಜೆರುಸಲೇಮಿನ ಅಲ್-ಅಖ್ಸಾ ಮಸೀದಿಗೆ ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಉಗ್ರನೋರ್ವ ಬೆಂಕಿ ಹಚ್ಚಿದ್ದನು. ಜಾಗತಿಕ ಮಟ್ಟದಲ್ಲಿ ಪ್ರತಿಭಟನೆಗೊಳಗಾದ ಘಟನೆಯ 50ನೇ ವಾರ್ಷಿಕದಂದು ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆ ಈ ಹೇಳಿಕೆ ನೀಡಿದೆ.

ಪ್ಯಾಲೆಸ್ತೀನ್ ಮತ್ತು ಖುದ್ಸ್‌ನ ಕ್ರಿಶ್ಚಿಯನ್ ಚಿಹ್ನೆಗಳು ಸಹಿತ ಸಂರಕ್ಷಿಸಲ್ಪಡಬೇಕು. ಮುಸ್ಲಿಮರು ಪ್ರಾರ್ಥನೆಗಾಗಿ ಮಕ್ಕಾದ ಕ‌ಅಬಾ ಕಡೆಗೆ ತಿರುಗುವ ಮೊದಲು ಮಸ್ಜಿದುಲ್ ಅಖ್ಸಾ ಕಡೆಗೆ ತಿರುಗಿ ನಮಾಝ್ ನಿರ್ವಹಿಸಲಾಗುತ್ತಿತ್ತು. ಇದು ಮೊದಲ ಕಿಬ್ಲಾ ಮತ್ತು ಮೂರನೇ ಹರಮ್ ಆಗಿದೆ. ಈಗಲೂ ಮಸೀದಿ ಮೇಲಿನ ಆಕ್ರಮಣ ಮುಂದುವರಿದಿದ್ದು, ಮುಸ್ಲಿಮರಿಗೆ ಇಲ್ಲಿ ನಿಯಂತ್ರಣವಿದೆ. ಮಸೀದಿಯ ಸುತ್ತಲೂ ಕಂದಕಗಳನ್ನು ನಿರ್ಮಿಸಿರುವ ಇಸ್ರೇಲಿ ನಡೆ ಖಂಡನಾರ್ಹವಾಗಿದೆ ಎಂದು ಒಐಸಿ ತಿಳಿಸಿದೆ.

ಅಂತರರಾಷ್ಟ್ರೀಯ ನಿಯಮಗಳು ಮತ್ತು ನಿಬಂಧನೆಗಳನ್ನು ಪಾಲಿಸುವಂತೆ ಇಸ್ರೇಲ್ ಅನ್ನು ಒತ್ತಾಯಿಸಲು ಅಂತರ್‌ರಾಷ್ಟ್ರೀಯ ಸಮುದಾಯವು ಮುಂದೆ ಬರಬೇಕು ಮತ್ತು 1967 ರ ಖುದ್ಸ್ ರಾಜಧಾನಿಯಾಗಿರುವ ದೇಶವನ್ನು ಮತ್ತೆ ವಶಪಡಿಸಿಕೊಳ್ಳುವವರೆಗೂ ಬೆಂಬಲ ಮುಂದುವರಿಯುತ್ತದೆ ಎಂದು ಓಐಸಿ ಘೋಷಿಸಿದೆ.

error: Content is protected !! Not allowed copy content from janadhvani.com