janadhvani

Kannada Online News Paper

ಗ್ರಾಹಕರ ರಹಸ್ಯ ಮಾಹಿತಿಗಳನ್ನು ಸಂಗ್ರಹಿಸದಂತೆ ‘ಸಾಮ’ ಎಚ್ಚರಿಕೆ

ರಿಯಾದ್: ಸೌದಿ ಅರೇಬಿಯಾದ ವ್ಯಾಪಾರ ಸಂಸ್ಥೆಗಳಲ್ಲಿ ಗ್ರಾಹಕರ ಎಟಿಎಂ ಕಾರ್ಡ್ ಕಾಪಿಗಳನ್ನು ಸಂಗ್ರಹಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾಮ ಎಚ್ಚರಿಕೆ ನೀಡಿದೆ. ಗ್ರಾಹಕರು ಪಡೆಯುವ ಸಾಮಗ್ರಿಗಳಿಗೆ ಕಾರ್ಡ್ ಮೂಲಕ ಮೊತ್ತವನ್ನು ಪಡೆಯಬೇಕು. ಆದರೆ, ಕಾರ್ಡಿನ ವಿವರಗಳನ್ನು ಸಂಗ್ರಹಿಸುವುದು ಕಾನೂನು ಬಾಹಿರ ಎಂದು ಅದು ಹೇಳಿಕೊಂಡಿದೆ.

ಸೌದಿ ಅರೇಬಿಯನ್ ಮನಿಟರಿ ಅಥಾರಿಟಿ (ಸಾಮ) ಹೆಚ್ಚರಿಕೆ ನೀಡಿದ್ದು, ಸೌದಿಯ ವ್ಯಾಪಾರ ವಲಯದಲ್ಲಿ ಎಟಿಎಂ ಕಾರ್ಡಿನ ಉಪಯೋಗ ವ್ಯಾಪಕವಾಗಿ ಹೆಚ್ಚಾಗಿದೆ ಎನ್ನಲಾಗಿದೆ. ಕಾರ್ಡ್ ಯಂತ್ರದಲ್ಲಿ ಪಿನ್ ಸಂಖ್ಯೆ ನೀಡದೆ ವ್ಯವಹರಿಸಲು ಈಗ ಸಾಧ್ಯವಿದೆ. ಇತ್ತೀಚೆಗೆ ಕೆಲವು ಸಂಸ್ಥೆಗಳು ಕಾರ್ಡಿನ ನಕಲು ಪಡೆದಿಡುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಎನ್ನಲಾಗಿದೆ.

ಈ ಮೂಲಕ ದುರುಪಯೋಗ ಸಾಧ್ಯವಿರುವ ಕಾರಣ ವ್ಯವಹಾರ ಮುಗಿದ ತಕ್ಷಣ ಕಾರ್ಡ್ ಹಿಂತಿರುಗಿಸ ಬೇಕೆಂದು ಸಾಮ ತಿಳಿಸಿದೆ. ಗ್ರಾಹಕರಿಗೆ ಸ್ವೀಪಿಂಗ್ ಯಂತ್ರ ನೀಡುವ ಸಂಸ್ಥೆಗಳಿಗೂ ಈ ಎಚ್ಚರಿಕೆಯನ್ನು ನೀಡಲಾಗಿದೆ.