ಕುವೈತ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಆಗಸ್ಟ್ 15ರ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವು ಕೆಸಿಎಫ್ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಝಕರಿಯ ಆನೇಕಲ್ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ಕೆಸಿಎಫ್ ರಾಷ್ಟ್ರೀಯ ಕೋಶಾಧಿಕಾರಿ ಮೂಸ ಇಬ್ರಾಹಿಂ ರವರು ನಿರ್ವಹಿಸಿ,ಸ್ವಾತಂತ್ರ ಕುರಿತು ಮಾತಾನಾಡಿ ಸೌಹಾರ್ದ ಶಾಂತಿಯ ಮೂಲಕ ಸ್ವಾತಂತ್ರ ಆಚರಿಸಲು ತಿಳಿಸಿದರು.
ಅದೇ ರೀತಿ ಪ್ರಾಸ್ತಾವಿಕ ಭಾಷಣ ಮಾಡಿದ ಕೆಸಿಎಫ್ ಸಾಂತ್ವನ ವಿಭಾಗದ ಚೇರ್ಮನ್ ಯಾಕುಬ್ ಕಾರ್ಕಳ ರವರು ಸ್ವಾತಂತ್ರ ಹೋರಾಟದಲ್ಲಿ ಮಡಿದಂತಹ ಹಲವಾರು ಹುತಾತ್ಮ ರನ್ನು ನೆನಪಿಸುತ್ತಾ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಹೋರಾಟ ಗಾರರನ್ನು ಸ್ಮರಿಸಿದರು. ವಿಶೇಶ ವಾಗಿ ಸ್ವಾತಂತ್ರ ಹೋರಾಟದಲ್ಲಿ ಮಹಾತ್ಮ ಗಾಂದಿ, ಶೌಖತ್ ಅಲಿ, ಟಿಪ್ಪು ಸುಲ್ತಾನರ ಕೊಡುಗೆ ಯನ್ನು ಮುಂದಿಟ್ಟು ವಿವರಿಸಿದರು.
ಮತ್ತು ಕೆಸಿಎಫ್ ಅಂತರರಾಷ್ಟ್ರೀಯ ಆಡಳಿತ ವಿಭಾಗದ ಕಾರ್ಯದರ್ಶಿ ಹಾಗೂ ಕೆಸಿಎಫ್ ಕುವೈತ್ ಸಂಘಟನಾ ಅಧ್ಯಕ್ಷರಾದ ಹುಸೈನ್ ಎರ್ಮಾಡ್ ಸ್ವಾತಂತ್ರೋತ್ಸವದ ಶುಭ ಹಾರೈಸಿದರು. ಕೆಸಿಎಫ್ ಅಧ್ಯಕ್ಷರು ಮಾತನಾಡಿ ಶಾಂತಿ ಸೌಹಾರ್ದದಿಂದ ನಾವೆಲ್ಲರೂ ಬದುಕ ಬೇಕೆಂದು ತಿಳಿ ಹೇಳಿದರು ಹಾಗೂ ಇತ್ತೀಚೆಗೆ ನಡೆದಂತ ಪ್ರವಾಹಪೀಡಿತ ಪ್ರದೇಶ ಗಳಿಗೆ ಸಹಾಯ ಹಸ್ತ ನೀಡಬೇಕಾಗಿ ತಿಳಿಸಿದರು.
ಕೆಸಿಎಫ್ ಸೌತ್ ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ‘ಸ’ಅದಿ ಝುಹ್ರಿ ದುವಾ ನೆರವೇರಿಸಿದರು. ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು. ಸಂಘಟನಾ ಕಾರ್ಯದರ್ಶಿ ತೌಫಿಕ್ ಅಡ್ಡೂರು ಎಲ್ಲರಿಗೂ ಧನ್ಯವಾದ ಗೈದರು.
ವರದಿ. ಇಬ್ರಾಹಿಂ ವೇಣೂರು
ಪ್ರಕಾಶನ ವಿಭಾಗ ಕೆಸಿಎಫ್ ಕುವೈತ್