janadhvani

Kannada Online News Paper

ಹೊಸನಗರ ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ಅಲಿ ಮದನಿ ಹಬ್ಬದ ವಿಶೇಷತೆಯನ್ನು ವಿವರಿಸುತ್ತಾ
ತ್ಯಾಗ ಬಲಿದಾನಗಳ ಸ್ಮರಣೆಗಳು ಮತ್ತೆ ಮರುಕಳಿಸುತ್ತಾ ಮತ್ತೊಮ್ಮೆ ಬಕ್ರೀದ್ ನಮ್ಮೆಡೆಗೆ ಬಂದಿದೆ.

ಈ ಬಕ್ರೀದ್ ಹಬ್ಬದ ಶುಭ ಸಂದರ್ಭದಲ್ಲಿ ನಿಮ್ಮ ಮನದಲ್ಲೂ ಮನೆಯಲ್ಲೂ ಸಂತೋಷ ತುಂಬಿ ತುಳುಕಲಿ.

ಶಾಂತಿ ಸಮಾಧಾನ ಸಂತೋಷ ಸಂಭ್ರಮದ ಸಂದೇಶಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು, ಮನದಲ್ಲಿರುವ ಹಳೆಯ ದ್ವೇಷ ವೈಷಮ್ಯಗಳನ್ನು ದೂರ ಮಾಡಿಕೊಂಡು ಮುಂಬರುವ ಜೀವನ ಸಂತೋಷದಿಂದ ಕೂಡಿರಲು ಈ ಈದುಲ್ ಅಝ್’ಹಾ ಕಾರಣವಾಗಲಿ.

ಪ್ರವಾಹಕ್ಕೆ ಬಲಿಯಾಗಿ ಮನೆಗಳನ್ನು ಮನೆಮಂದಿಯನ್ನು ಕಳಕೊಂಡ ಸಂತ್ರಸ್ತರನ್ನು ಮರೆಯದಿರೋಣ, ಇದ್ದುದನ್ನು ಪರಸ್ಪರ ಹಂಚಿ ಕೊಂಡು ಈದ್ ಆಚರಿಸೋಣ, ಈ ದಿನ ಅವರಿಗಾಗಿ ಏನಾದರು ಸಹಾಯ ಮಾಡೋಣ, ಅವರ ಕಣ್ಣೀರಿನಲ್ಲಿ ನಾವು ಭಾಗಿಯಾಗೋಣ. ಎಂದು ಹೇಳಿದರು ಈ ಸಂದರ್ಭದಲ್ಲಿ ಜಮಾಅತ್ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

error: Content is protected !! Not allowed copy content from janadhvani.com