ಮಿನಾ.ಆ,12: ಅರಫಾದ ಬಳಿಕ ಮಿನಾ ಮತ್ತು ಮಕ್ಕಾದಲ್ಲೂ ಭಾರೀ ಮಳೆ. ಸೌದಿ ಅರೇಬಿಯಾದ ಸುಡು ಬಿಸಿಲಿನ ತಾಪಮಾನಕ್ಕೆ ತಂಪೆರಗಿದ ಮಳೆಯು ಹಜ್ಜಾಜ್ ಗಳಿಗೆ ಸೂಕ್ತ ಹವಾಮಾನದಲ್ಲಿ ಹಜ್ ಕರ್ಮ ನಿರ್ವಹಿಸಲು ಅನುಕೂಲವಾಯಿತು.
ಜಂರಾ ಗಳಿಗೆ ಕಲ್ಲೆಸೆಯಲು ಹೊರಟಿದ್ದ ಹಜ್ಜಾಜ್ ಗಳು ಮಳೆ ಕಾರಣ ತೊಂದರೆಕ್ಕೀಡಾದರು. ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಚಿಕಿತ್ಸಾ ಸಂವಿಧಾನವನ್ನು ಏರ್ಪಡಿಸಲಾಗಿದೆ.
44 ಡಿಗ್ರಿ ವರೆಗೆ ತಲುಪಿದ್ದ ಬಿಸಿಲ ತಾಪಮಾನವು ಆರಫಾ ದಿನದ ಮಳೆಯಿಂದಾಗಿ 33ಕ್ಕೆ ಇಳಿದಿದೆ. ಮಳೆಯ ಕಾರಣದಿಂದ ಹಜ್ ನ ಪ್ರಮುಖ ಕರ್ಮಗಳನ್ನು ಉತ್ತಮ ಹವಾಮಾನದಲ್ಲಿ ಪೂರ್ಣಗೊಳಿಸಲು ಸಾಧ್ಯವಾಯಿತು.
ಇವತ್ತಿನ ಮಳೆಯು ಮಿನಾದಲ್ಲೂ, ಮಿನಾದಿಂದ ಮಕ್ಕಾಕೆ ಹೊರಟಿದ್ದ ಹಜ್ ಯಾತ್ರಿಕರಿಗೂ ಮಳೆ ತಂಪೆರೆಯಿತು.ದಾರಿ ಮಧ್ಯೆ ಸಿಲುಕಿರುವ ಹಜ್ಜಾಜ್ ಗಳಿಗೆ ಸ್ವಯಂ ಸೇವಕರು ನೆರವಾದರು.