ಮಂಗಳೂರು.ಆ,12: ಇಂದು ಮುಸ್ಲಿಮರ ಪವಿತ್ರ ಹಬ್ಬಗಳೊಲ್ಲೊಂದಾದ ಬಕ್ರೀದ್ ದಿನ. ದೇಶಾದ್ಯಂತ ಮುಸಲ್ಮಾನರು ಹಬ್ಬದ ಪ್ರತ್ಯೇಕ ನಮಾಜಿನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಷಯ ಕೋರಿದರು.
ಕರ್ನಾಟಕ, ಮತ್ತು ಕೇರಳದಲ್ಲುಂಟಾದ ನೆರೆ ಹಾವಳಿಯ ದೃಶ್ಯಾವಳಿಗಳು ಮನದಲ್ಲಿ ತೇಲಿ ಬರುತ್ತಿರುವ ಈ ಸಂದರ್ಭದಲ್ಲಿ ಬಕ್ರೀದ್ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿ, ಬಕ್ರೀದ್ ನಮಾಜ್ ಬಳಿಕ ದೇಣಿಗೆ ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ಆಸರೆಯಾಗ ಬೇಕೆಂದು SJU, SJM, SYS, SSF,KMJ, SEDC, SMA, KCF(ಸುನ್ನೀ ಕೋ ಓರ್ಡಿನೇಶನ್) ಸಮಿತಿಯು ಕರೆ ನೀಡಿತ್ತು.
ಈ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ದೇಣಿಗೆ ಸಂಗ್ರಹಿಸಲಾಯಿತು.
ಅಲ್ಲಿಂದು ಬಿರಿಯಾನಿಯ ಘಮಘಮವಿಲ್ಲ ಕುರ್ಬಾನಿಯ ಗೌಜಿಗದ್ದಲವಿಲ್ಲ…
ಕಣ್ಣು ಮುಚ್ಚಿದರೂ ತೆರೆದರೂ ಕಣ್ಣಮುಂದೆ ತೇಲಿ ಬರುತ್ತಿರುವುದು ನಮ್ಮ ಬಟ್ಟೆ ಎಳೆಯುತ್ತಾ ಆಸೆಗಣ್ಣುಗಳಿಂದ ಕೈ ಚಾಚುವ ಪುಟಾಣಿಗಳು,
ಕೈ ಮುಗಿಯುತ್ತಾ ನಮ್ಮ ಮುಂದೆ ಬಿಕ್ಕಿಬಿಕ್ಕಿ ಅತ್ತ ಅಮ್ಮಂದಿರು, ಉಕ್ಕಿ ಬರುವ ದುಃಖವನ್ನು ಅದಮಿಟ್ಟುಕೊಂಡು ಎಲ್ಲವನ್ನೂ ಕಳಕೊಂಡು ರೋಧಿಸುವ ಬಡಜೀವಗಳು…
ಇಂದು ಬಕ್ರೀದ್ ಹಬ್ಬ! ಅವರಿಗಿಂದು ಹೊಸವಸ್ತೃದ ಸಂಭ್ರಮವಿಲ್ಲ, ಬಿರಿಯಾನಿಯ ಘಮಘಮವಿಲ್ಲ, ಕುರ್ಬಾನಿಯ ಗೌಜಿಗದ್ದಲವಿಲ್ಲ, ನಗುಮುಖದ ಬಕ್ರೀದ್ ಇಲ್ಲವೇ ಇಲ್ಲ!! ಶಾಲೆಯ, ಶಾದೀ ಮಹಲಿನ ಮೂಲೆಯಲ್ಲಿ ವಾರಗಳ ಹಿಂದೆ ಉಟ್ಟ ಅದೇ ಬಟ್ಟೆಯಲ್ಲಿ, ತಮ್ಮದೆಲ್ಲವನ್ನೂ ಕಳಕೊಂಡಿರುವ ದುಃಖದಲ್ಲಿ ಇವತ್ತು ಬಕ್ರೀದ್ ಆಚರಿಸಬೇಕಿದೆ.
ತಮ್ಮವರನ್ನೂ, ತಮ್ಮದೆಲ್ಲವನ್ನೂ ಕಳಕೊಂಡು ರೋಧಿಸುತ್ತಿರುವ ಆ ನಮ್ಮ ಸಹೋದರರಿಗಾಗಿ ಈ ದಿನವನ್ನು ಮೀಸಲಿಡಲು, ಪ್ರಾರ್ಥಿಸಲು ಮರೆಯದಿರೋಣ..
ಇಂದು ಬಕ್ರೀದ್ ನಮಾಝಿನ ಬಳಿಕ ಹಣ ಸಂಗ್ರಹಕ್ಕಾಗಿ ಸುನ್ನೀ ಕೋ ಓರ್ಡಿನೇಶನ್ ಸಮಿತಿ ಕರೆಕೊಟ್ಟಿದೆ, ಅಗತ್ಯ ವಸ್ತುಗಳ ಸಂಗ್ರಹಕ್ಕಾಗಿ ಎಸ್ಸೆಸ್ಸೆಫ್ ಕರೆನೀಡಿದೆ.
ನಿನ್ನೆಯಿಂದಲೇ ನಮ್ಮ ಕಾರ್ಯಕರ್ತರು ಇದಕ್ಕಾಗಿ ಬೀದಿಗಿಳಿದಿದ್ದಾರೆ. ಪ್ರತಿ ಯುನಿಟ್ ಕಾರ್ಯಕರ್ತರಿಂದ ಹಿಡಿದು ರಾಜ್ಯ ನಾಯಕರ ವರೆಗೆ ಎಲ್ಲರೂ ಬೀದಿಗಿಳಿಯಲೇ ಬೇಕಾದ ಸಂದರ್ಭವಿದು.
ಈ ದಿನ ಆ ನಮ್ಮ ಸಹೋದರರಿಗಾಗಿ ಮೀಸಲಿಟ್ಟು ಹಬ್ಬವನ್ನು ಅರ್ಥಪೂರ್ಣ ಗೊಳಿಸೋಣವೇ…
ಹಾಫಿಝ್ ಸುಫ್ಯಾನ್ ಸಖಾಫಿ
(ಉಪಾಧ್ಯಕ್ಷ : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)