ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ,ಕಾಜೂರು, ಕಿಲ್ಲೂರು,ಕುಕ್ಕಾವು ಪೆರ್ದಾಡಿ ಮುಂತಾದ ಹಲವು ಊರಿನಲ್ಲಿ ನೆರೆಯಿಂದ ಸಂಕಷ್ಟಕ್ಕೊಳಗಾದ ಜನರನ್ನು ಭೇಟಿಯಾಗಿ ಅವರ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಹಲವರಿಗೆ ಈದ್ ಕಿಟ್ ವಿತರಿಸಿ,ಕಳೆದ ಹಲವು ದಿನಗಳಿಂದ ರಾತ್ರಿ ಹಗಲು ಸೇವೆಯಲ್ಲಿ ನಿರತರಾದ ಸಹೋದರರಿಗೆ ಸಿಹಿತಿಂಡಿ ವಿತರಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ NKM ಶಾಫಿ ಸಅದಿ ಬೆಂಗಳೂರು ಇವರ ನಾಯಕತ್ವದಲ್ಲಿ , KCF INC ಕಾರ್ಯದರ್ಶಿ ರಹೀಂ ಸಅದಿ, SჄS ಬೆಳ್ತಂಗಡಿ ಝೋನ್ ಅಧ್ಯಕ್ಷ SM ಕೋಯ ತಂಙಳ್, ಜಿಲ್ಲಾ SჄS ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು, ರಾಜ್ಯ SSF ಉಪಾಧ್ಯಕ್ಷರಾದ ಹಾಫಿಲ್ ಸುಫ್ಯಾನ್ ಸಖಾಫಿ, ರಾಜ್ಯ ಸುಪ್ರಿಂ ನಾಯಕರಾದ ಸಾದಿಕ್ ಮಲೆಬೆಟ್ಟು, ರಾಜ್ಯ ನಾಯಕರಾದ ಯಕೂಬ್ ಸಅದಿ, ಇಸ್ಮಾಯಿಲ್ ಮಾಸ್ಟರ್, ಜಿಲ್ಲಾ SSF ಕಾರ್ಯದರ್ಶಿ ರಷೀದ್ ಹಾಜಿ ವಗ್ಗ, ಜಿಲ್ಲಾ ನಾಯಕರಾದ ಶರೀಪ್ ಬೇರ್ಕಳ, SSF ಬೆಳ್ತಂಗಡಿ ಡಿವಿಷನ್ ಅಧ್ಯಕ್ಷರಾದ ಅಯ್ಯೂಬ್ ಮಹ್ಲರಿ, ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ನಾವೂರು, ಕೋಶಾಧಿಕಾರಿ ನಝೀರ್ ಮದನಿ, ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಡಿವಿಷನ್ ಕಾರ್ಯದರ್ಶಿ ನವಾಝ್ ಮಾವಿನಕಟ್ಟೆ, ಡಿವಿಷನ್ ನಾಯಕರಾದ ಸಿದ್ದೀಕ್ ಪರಪ್ಪು, ಸೆಕ್ಟರ್ ನಾಯಕ ಇಸಾಕ್ ಅರ್ವ, ಇಸಾಬಃ ಅಮೀರ್ ಅಬೂಸ್ವಾಲಿಹ್, ನಝೀರ್ ಪೆರ್ದಾಡಿ, ಕಾಜೂರು ದರ್ಗಾ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಹಾಗೂ ಬೆಳ್ತಂಗಡಿ ವ್ಯಾಪ್ತಿಯ SჄS & SSF ನಾಯಕರು ಭಾಗವಹಿಸಿದರು.
ವರದಿ:ಎಂ.ಎಂ.ಉಜಿರೆ.