ಅಬ್ದುಲ್ ರಹ್ಮಾನ್ ಸಖಾಫಿ, ಝಕರಿಯಾ ಆನೆಕಲ್ , ಮೂಸಾ ಇಬ್ರಾಹಿಂ ಸಾರಥಿಗಳು
ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕುವೈತ್ ರಾಷ್ಟ್ರೀಯ ಸಮಿತಿ ಮಹಾ ಸಭೆಯು ಅಬೂ ಹಲೀಫ ಸೆವೆನ್ ಸ್ಟಾರ್ ಸಭಾಂಗಣದಲ್ಲಿ ನಡೆಯಿತು.ಕೆಸಿಎಫ್ ಅಂತಾರಾಷ್ಟ್ರೀಯ ಕೌನ್ಸಿಲ್ ಸಂಘಟನಾ ಅಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಐ.ಎನ್.ಸಿ.ವೀಕ್ಷಕರಾಗಿ ಆಗಮಿಸಿ ಮಹಾಸಭೆಯನ್ನು ನಿಯಂತ್ರಿಸಿದರು.

ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಸಖಾಫಿ ಪೊಯ್ಯತ್ತಬೈಲ್, ಪ್ರಧಾನ ಕಾರ್ಯದರ್ಶಿಯಾಗಿ ಝಕರಿಯಾ ಆನೆಕಲ್, ಹಾಗೂ ಕೋಶಾಧಿಕಾರಿಯಾಗಿ ಮೂಸಾ ಇಬ್ರಾಹಿಂ ಅವರನ್ನು ಆರಿಸಲಾಯಿತು.
ಉಳಿದ ಪದಾಧಿಕಾರಿಗಳಾಗಿ: ಸಂಘಟನಾ ವಿಭಾಗ- ಹುಸೈನ್ ಎಮ್ಮೆಮಾಡು (ಅಧ್ಯಕ್ಷ) ತೌಸೀಫ್ ಅಡ್ಡೂರು (ಕಾರ್ಯದರ್ಶಿ)
ಶಿಕ್ಷಣ ವಿಭಾಗ- ಬಾದುಶಾ ಸಖಾಫಿ ಮಾದಾಪುರ (ಅಧ್ಯಕ್ಷ) ಮುಸ್ತಫಾ ಉಳ್ಳಾಲ್ (ಕಾರ್ಯದರ್ಶಿ)
ಸಾಂತ್ವನ ವಿಭಾಗ- ಯಾಕೂಬ್ ಕಾರ್ಕಳ (ಅಧ್ಯಕ್ಷ) ಇಕ್ಬಾಲ್ ಕಂದಾವರ (ಕಾರ್ಯದರ್ಶಿ)
ಇಹ್ಸಾನ್ ವಿಭಾಗ- ಅಝೀಝ್ ತಿಂಗಳಾಡಿ (ಅಧ್ಯಕ್ಷ) ತೌಫೀಖ್ ಕಾರ್ಕಳ (ಕಾರ್ಯದರ್ಶಿ)
ಆಡಳಿತ ವಿಭಾಗ-ಮಾಲಿಕ್ ಸೂರಿಂಜೆ (ಅಧ್ಯಕ್ಷ) ಶಮೀರ್ ಕೆ.ಸಿ.ರೋಡ್ (ಕಾರ್ಯದರ್ಶಿ)
ಪ್ರಕಾಶನ ವಿಭಾಗ- ಇಬ್ರಾಹಿಂ ವೇಣೂರು (ಅಧ್ಯಕ್ಷ) ಉಸ್ಮಾನ್ ಕೋಡಿ (ಕಾರ್ಯದರ್ಶಿ)
*ಕಾರ್ಯಕಾರಿ ಸಮಿತಿ ಸದಸ್ಯರಾಗಿ-
*ಉಮರುಲ್ ಫಾರೂಖ್ ಸಖಾಫಿ ಬೆಳ್ತಂಗಡಿ
*ಉಮರ್ ಝುಹ್ರಿ ಮಂಜನಾಡಿ
* ಅಬ್ದುಲ್ಲತೀಫ್ ಬಂಟ್ವಾಳ
* ಸಲಾಂ ಮಣಿಪುರ
*ಅಶ್ರಫ್ ಕಾರ್ಗಿಲ್
*ಪಿ.ಪಿ.ಹಮೀದ್ ಕಾಶಿಪಟ್ನ
*ಅಹ್ಮದ್ ಬಾವ ಕುಪ್ಪೆಪದವು
*ಶಾಹುಲ್ ಹಮೀದ್ ಝುಹ್ರಿ,ಸ’ಅದಿ
*ಅಬ್ಬಾಸ್ ಬಳಂಜ
*ಶೌಕತ್ ಶಿರ್ವ
INC COUNCILLOR ಗಳಾಗಿ
ಹುಸೈನ್ ಎಮ್ಮೆಮಾಡು, ತೌಫೀಖ್ ಅಡ್ಡೂರು
ಅವರನ್ನು ಆರಿಸಲಾಯಿತು.

ಅಬ್ದುಲ್ ರಹ್ಮಾನ್ ಸಖಾಫಿ ಅಧ್ಯಕ್ಷತೆ ವಹಿಸಿ, ಉಮರುಲ್ ಫಾರೂಖ್ ಸಖಾಫಿ ಬೆಳ್ತಂಗಡಿ ಉದ್ಘಾಟಿಸಿದರು. ಐ.ಎನ್.ಸಿ.ಆಡಳಿತ ವಿಭಾಗ ಕಾರ್ಯದರ್ಶಿ ಹುಸೈನ್ ಎಮ್ಮೆಮಾಡ್ ಶುಭಾಶಯ ಗೈದರು. ಝಕರಿಯಾ ಆನೆಕಲ್ ಸ್ವಾಗತಿಸಿ ಇಬ್ರಾಹಿಂ ವೇಣೂರು ಧನ್ಯವಾದ ಸಲ್ಲಿಸಿದರು.






