janadhvani

Kannada Online News Paper

ಅಜ್ಮಾನ್‌-ಶಾರ್ಜಾ-ದುಬೈ ರಸ್ತೆಯು ಎರಡು ವಾರಗಳ ಅವಧಿಗೆ ಮುಚ್ಚಲಾಗುವುದು

ಅಜ್ಮಾನ್: ಅಜ್ಮಾನ್‌ನಿಂದ ಶಾರ್ಜಾ ಮಾರ್ಗವಾಗಿ ದುಬೈಗೆ ಇರುವ ಸರ್ವೀಸ್ ರಸ್ತೆಯು ಎರಡು ವಾರಗಳ ಅವಧಿಗೆ ಮುಚ್ಚಲಾಗುವುದು ಎಂದು ಅಧಿಕಾರಿಗಳು ಸ್ಪಷ್ಪಡಿಸಿದ್ದಾರೆ.

ಶೈಖ್ ಮುಹಮ್ಮದ್ ಬಿನ್ ಝಾಯಿದ್ ರಸ್ತೆಯಲ್ಲಿ ಅಲ್ ತಿಖ ಕ್ಲಬ್ ಫೋರ್ ಹಾಂಡಿ ಕ್ಯಾಪೆಡ್ ಬ್ರಿಡ್ಜ್‌ ‌ನ ಕೆಳಗಿರುವ ಸರ್ವೀಸ್ ರಸ್ತೆಯನ್ನು ಮುಚ್ಚಲಾಗುತ್ತಿದೆ ಎಂದು ಯುಎಇ ಇನ್ ಫ್ರಾ ಸ್ಟ್ರಕ್ಚರ್ ಡೆವಲಪ್ಮೆಂಟ್ ಸಚಿವಾಲಯ ತಿಳಿಸಿದೆ.

ಆಗಸ್ಟ್‌ ಒಂದರಿಂದ ಕೆಲಸದ ದಿನಗಳಲ್ಲಿ ಮುಂಜಾನೆ ಒಂದರಿಂದ 5:30ರ ವರೆಗೆ ಶುಕ್ರವಾರ ಎರಡರಿಂದ ಬೆಳಿಗ್ಗೆ10ರ ವರೆಗೆ ಈ ರಸ್ತೆಯಲ್ಲಿ ಸಂಚಾರ ಅನುಮತಿಸಲಾಗುವುದಿಲ್ಲ. ಈ ವೇಳೆಯಲ್ಲಿ ಇತರ ರಸ್ತೆಗಳನ್ನು ಅವಲಂಬಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.