janadhvani

Kannada Online News Paper

ತಾಜುನ್ನೂರ್: ತಹ್ಲೀಲ್ ಸಮರ್ಪಣೆ ಹಾಗೂ ಅನುಸ್ಮರಣೆ ಸಂಗಮ

ತಾಜುನ್ನೂರ್ ಎಜ್ಯುಕೇಶನಲ್ ಅಕಾಡೆಮಿ ಗೋಳಿಯಂಗಡಿ ಇದರ ವತಿಯಿಂದ ಶೈಖುನಾ
ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ (ನ.ಮ) ಹಾಗೂ ಮರ್ಹೂಂ ಸ್ವಾದಿಖ್ ಕುಕ್ಕೇಡಿ ರವರ ಹೆಸರಿನಲ್ಲಿ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಅಮೀರ್ ಸಾಹೆಬ್ ಕಾಂಪೌಂಡ್ ನ ತಾಜುನ್ನೂರ್ ಬಿಲ್ಡಿಂಗ್ ನಲ್ಲಿ ನಡೆಯಿತು.

ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷರಾದ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ, KCF ನಾಯಕರಾದ ಕರೀಂ ಲತ್ವೀಫಿ ಬೇಂಗಿಲ, ಜಲಾಲುದ್ದೀನ್ ಬಾಹಸನಿ ಉಲ್ತೂರು, ಯೂಸುಫ್ ಕಳಂಜಿಬೈಲ್, ಶರೀಫ್ ಮುಸ್ಲಿಯಾರ್, ಬಶೀರ್ ಗೋಳಿಯಂಗಡಿ, SMA ನಾಯಕರಾದ ಇಸ್ಮಾಯಿಲ್ ಉಲ್ತೂರ್, B.K.ಅಬ್ಬಾಸ್ ಹಾಜಿ, ರೇಂಜ್ ನಾಯಕರಾದ ಫಾರೂಖ್ ಝುಹ್ರಿ, ಹನೀಫ್ ಬಾಹಸನಿ, ಶಂಸುದ್ದೀನ್ ಮುಸ್ಲಿಯಾರ್, ರಿಯಾಝ್ ಬಾಹಸನಿ, MJM ಕುಂಡದಬೆಟ್ಟು ಉಪಾಧ್ಯಕ್ಷ ಅಶ್ರಫ್ ಅಸರ್, ಮಾಜಿ ಕಾರ್ಯದರ್ಶಿ ಹಸೈನಾರ್, ಸದಸ್ಯರಾದ ಉಸ್ಮಾನ್ ಮುಸ್ಲಿಯಾರ್, ಹಾಗೂ SYS ಕಾರ್ಯಕರ್ತರು, SSF ಸೆಕ್ಟರ್ ನಾಯಕರಾದ ಝುಬೈರ್ ಶಾಂತಿನಗರ, ಸಲೀಂ ಗೋಳಿಯಂಗಡಿ, ಯುನಿಟ್ ನಾಯಕರಾದ ಆಶಿಖ್, ಶಮೀರ್ ಗೋಳಿಯಂಗಡಿ, ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜುನ್ನೂರ್ ಟ್ರಸ್ಟ್ ಚೇರ್ಮಾನ್ ಮುತ್ತಲಿಬ್ ಸ್ವಾಗತಿಸಿ, ಕನ್ವೀನರ್ ಕೆ.ಎಂ.ಹನೀಫ್ ಸಖಾಫಿ ಪ್ರಾಸ್ತಾವಿಕ‌ವಾಗಿ ಮಾತನಾಡಿದರು. ಟ್ರಸ್ಟ್ ನ ಕೋಶಾಧಿಕಾರಿ ಕೆ.ವೈ.ಇಸ್ಮಾಯಿಲ್, ಸದಸ್ಯರಾದ ಹನೀಫ್ ಗೋಳಿಯಂಗಡಿ,ಕೆ.ಎನ್.ಹೈದರ್ ಗೋಲ್ಡನ್ ಉಪಸ್ಥಿತರಿದ್ದರು.