janadhvani

Kannada Online News Paper

ದುಬೈ- ಕಣ್ಣೂರು ‘ಗೋ ಏರ್’ ಬುಕಿಂಗ್ ಆರಂಭಗೊಂಡಿದೆ

ದುಬೈ: ದುಬೈಯಿಂದ ಕಣ್ಣೂರು ಮತ್ತು ಅಲ್ಲಿಂದ ದುಬೈಗೆ ಗೋ ಏರ್‌ನ ಟಿಕೆಟ್ ಬುಕ್ಕಿಂಗ್ ಪ್ರಾರಂಭಿಸಲಾಗಿದ್ದು, ಜುಲೈ 25 ರಿಂದ ನೇರವಾಗಿ ದುಬೈಗೆ ಹೊರಡುವುದು ಸಾಧ್ಯವಾಗಲಿದೆ. ಕಾಸರ್‌ಗೋಡು, ಕಣ್ಣೂರು ಮತ್ತು ಕೋಝಿಕೋಡ್ ಜಿಲ್ಲೆಗಳ ವಲಸಿಗರಿಗೆ ಈ ಸೇವೆ ತುಂಬಾ ಉಪಯುಕ್ತವಾಗಲಿದೆ.

ಸ್ವಂತ ಊರಿಗೆ ವಿಮಾನ ನಿಲ್ದಾಣ ಬಂದಿದ್ದರೂ, ದುಬೈನಲ್ಲಿ ನೆಲೆಸಿರುವ ಕಣ್ಣೂರು ಸ್ವದೇಶೀಯರಿಗೆ ಅಬುಧಾಬಿ ಮತ್ತು ಶಾರ್ಜಾದಿಂದ ಮಾತ್ರ ನೇರವಾಗಿ ಪ್ರಯಾಣಿಸಲು ಸಾಧ್ಯವಾಗಿದ್ದವು. ಆದರೆ ದುಬೈನಿಂದ ಸೇವೆ ಪ್ರಾರಂಭವಾದ ನಂತರ ಇದಕ್ಕೆ ಪರಿಹಾರ ಉಂಟಾಗಿದೆ.

ಮೊದಲ ವಿಮಾನ, ಜಿ 8-58 ಗೋ ಏರ್, ಕಣ್ಣೂರಿನಿಂದ ದುಬೈಗೆ ಜು. 25 ರಂದು ಸಂಜೆ 7:30ಕ್ಕೆ ಹಾರಾಟ ನಡೆಸಲಿದೆ. ವಿಮಾನವು ರಾತ್ರಿ 10 ಗಂಟೆಗೆ ದುಬೈಗೆ ತಲುಪಲಿದ್ದು, ಜಲಾಭಿಷೇಕದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಕಣ್ಣೂರಿಗೆ ಜಿ 8-57 ವಿಮಾನವು ರಾತ್ರಿ 12.20 ಕ್ಕೆ ಹೊರಡಲಿದೆ. ಇದು ಬೆಳಿಗ್ಗೆ 5.55 ಕ್ಕೆ ಕಣ್ಣೂರು ತಲುಪಲಿದೆ.

ಈ ಹಿಂದೆ ಕಣ್ಣೂರು ಹೋಗುವವರಿಗೆ ಕ್ಯಾಲಿಕಟ್ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು ಅವಲಂಬಿಸಬೇಕಾಗಿತ್ತು. ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಕನಿಷ್ಠ ನಾಲ್ಕೈದು ಗಂಟೆಗಳ ಕಾಲ ಯಾತ್ರೆ ಮಾಡ ಬೇಕಾಗಿ ಬರುತ್ತಿದ್ದವು. ಈಗ ಪ್ರಯಾಣ ಒಂದು ಗಂಟೆಗೆ ಇಳಿಯಲಿದೆ. ಮಧ್ಯರಾತ್ರಿಯಲ್ಲಿ ದುಬೈನಿಂದ ವಿಮಾನ ಹತ್ತಿದರೆ ಅವರು ಉಪಾಹಾರಕ್ಕಾಗಿ ಮನೆಗೆ ತಲುಪಬಹುದು ಎಂದು ಕಣ್ಣೂರಿಗರು ಅಭಿಪ್ರಾಯಪಟ್ಟಿದ್ದಾರೆ.