janadhvani

Kannada Online News Paper

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ನಿಂದ ರಕ್ತದಾನ ಶಿಬಿರ

ಮಾಣಿ : ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್,ಬ್ಲಡ್ ಸೈಬೋ ದ.ಕ ಜಿಲ್ಲಾ ಸಮಿತಿ ಹಾಗೂ ಪೆರ್ನೆ ಸುನ್ನೀ ಸೆಂಟರ್ ಸಂಘಟನೆಗಳ ವತಿಯಿಂದ ಬೃಹತ್ ರಕ್ತದಾನ ಶಿಬಿರವು ಜುಲಾಯಿ 21 ಆದಿತ್ಯವಾರ ಪೆರ್ನೆ ಸುನ್ನೀ ಸೆಂಟರ್ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮವು ಬೆಳಿಗ್ಗೆ 8.30 ರಿಂದ ಆರಂಭಗೊಂಡು ಮಧ್ಯಾಹ್ನ ತನಕ ನಡೆಯಲಿರುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.