janadhvani

Kannada Online News Paper

ಮರ್ಕಝುನ್ನೂರ್ ಸುನ್ನೀ ಮದ್ರಸ ಬೆಂಗರೆ-ಎಸ್.ಬಿ.ಎಸ್ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಜು.16: ಮರ್ಕಝುನ್ನೂರ್ ಸುನ್ನೀ ಮದ್ರಸ ಬೆಂಗರೆ ಇದರ 2018-19 ರ ಸಾಲಿನ ಎಸ್.ಬಿ.ಎಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮದ್ರಸಾ ಹಾಲ್ ನಲ್ಲಿ ಜರುಗಿದ ಸಭೆಯ ಅಧ್ಯಕ್ಷತೆಯನ್ನು ಮದ್ರಸ ಮುಖ್ಯೋಪಾದ್ಯಾಯ ನೌಶಾದ್ ಮದನಿ ಅಡ್ಯಾರ್ ವಹಿಸಿದ್ದರು. ಎಸ್.ಬಿ.ಎಸ್ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್, ಕಾರ್ಯದರ್ಶಿಯಾಗಿ ಹಸನ್ ಅನಸ್ ಮತ್ತು ಕೊಶಾಧಿಕಾರಿಯಾಗಿ ಮುಹಮ್ಮದ್ ಫರಾಝ್ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಝಯಾನ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಅಲ್ಫಾಝ್ ರವರು ಆಯ್ಕೆಯಾದರು.

ಸಭೆಯಲ್ಲಿ ಮದರಸ ಅಧ್ಯಾಪಕ ಶರೀಫ್ ಮದನಿ ತೆಕ್ಕಾರ್ ಮತ್ತು ವೀಕ್ಷರಾಗಿ ಆದಂ ಮುಸ್ಲಿಯಾರ್ ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.