ಪುತ್ತೂರು : ಮದನೀಸ್ ಅಸೋಸಿಯೇಶನ್ ಪುತ್ತೂರು ತಾಲೂಕು ಇದರ ಅಧೀನದಲ್ಲಿ ಮರ್ಹೂಂ ಶೈಖುನಾ ಬಾವ ಉಸ್ತಾದ್ ರವರ ಅನುಸ್ಮರಣಾ ಸಮಾರಂಭವು ಇತ್ತೀಚೆಗೆ ಪುತ್ತೂರು ಸುನ್ನೀ ಸೆಂಟರ್ ನಲ್ಲಿ ನಡೆಯಿತು.ಆದಂ ಮದನಿ ಆತೂರು ರವರ ಅಧ್ಯಕ್ಷತೆಯಲ್ಲಿ ನಡೆದ ಸಂಗಮವನ್ನು ತಿಂಗಳಾಡಿ ಅಝೀಝ್ ಮದನಿ ರವರು ಔಪಚಾರಿಕವಾಗಿ ಉದ್ಘಾಟಿಸಿದರು.
ಸಮಿತಿಯ ನಿರ್ದೇಶಕರೂ ಮದನೀಸ್ ಕೇಂದ್ರ ಸಮಿತಿಯ ಕಾರ್ಯದರ್ಶಿಯೂ ಆದ ಅಬ್ಬಾಸ್ ಮದನಿ ಬಂಡಾಡಿರವರು ಅನುಸ್ಮರಣಾ ಭಾಷಣ ನಡೆಸಿದರು.
ಮಿತ್ತೂರು ಹಂಝ ಮದನಿ ಮುಖ್ಯಪ್ರಭಾಷಣ ನಡೆಸಿದರು.ಮುಹಮ್ಮದ್ ಮದನಿ ತಿಂಗಳಾಡಿ, ಅಬ್ದುಲ್ಲ ಮದನಿ ಇರ್ದೆ, ಅಬ್ದುರ್ಹ್ಮಾನ್ ಮದನಿ ಬನ್ನೂರು, ಟಿ.ಕೆ.ಇಬ್ರಾಹಿಮ್ ಮದನಿ ಮರ್ದಾಳ,ಆಶಂಸಾ ಭಾಷಣ ಮಾಡಿದರು.ಜಮಾಲ್ ಮದನಿ ಆತೂರು ಸ್ವಾಗತಿಸಿ ಕೊನೆಯಲ್ಲಿ ಶಾಫಿ ಮದನಿ ಮಾಡಾವು ವಂದಿಸಿದರು.






