ಉಪ್ಪಿನಂಗಡಿ.ಜುಲೈ,15:ಸುನ್ನೀ ಸೆಂಟರ್ (SJM.SMA.SYS.SSF) ನೂತನ ಕಛೇರಿಯ ಉಧ್ಘಾಟನೆಯನ್ನು ಕರ್ನಾಟಕ ರಾಜ್ಯ ಸುನ್ನೀ ಜಂ ಇಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಬಹು| ಝೈನುಲ್ ಉಲಮಾ ಮಾಣಿ ಉಸ್ತಾದ್ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನ್ನೀ ಸೆಂಟರ್ ಚೆರ್ಮೇನ್ ಅಸ್ಸಯ್ಯಿದ್ ಸಾದಾತ್ ತಂಙಳ್ ವಹಿಸಿದರು. SJM ಉಪ್ಪಿನಂಗಡಿ ರೇಂಜ್ ಅಧ್ಯಕ್ಷರಾದ ಮುತ್ತಲಿಬ್ ಸಖಾಫಿ ಕಾರ್ಯಕ್ರಮವನ್ನು ಅಧಿಕೃತವಾಗಿ ಉಧ್ಘಾಟಿಸಿದರು.
ಸುನ್ನೀ ಸೆಂಟರ್ ಕನ್ವೀನರ್ ಮುಹಮ್ಮದ್ ಅಲಿ ತುರ್ಕಳಿಕೆ ಸ್ವಾಗತಿಸಿದರು. ಎಸ್ ವೈ ಎಸ್ ಉಪ್ಪಿನಂಗಡಿ ಸೆಂಟರ್ ಪ್ರ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಹಜ್ಜ್ ನಿರ್ವಹಿಸಲು ಹೊರಡಲಿರುವ ನಝೀರ್ ಸಅದಿ ಬಾಜಾರು ರವರನ್ನು ರಿಜಿನಲ್ ವತಿಯಿಂದ ಶಾಲು ಹೊದಿಸಿ ಬಿಳ್ಕೂಡುಗೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಇಸ್ಹಾಖ್ ಹಾಜಿ ಮೇದರಬೆಟ್ಟು, ಮುಹಮ್ಮದ್ ಹಾಜಿ ನೆಕ್ಕಿಲಾಡಿ, ಉಮರ್ ತಾಜ್ ನೆಲ್ಯಾಡಿ, ರಝಾಖ್ ಹಾಜಿ ಮೊರಂಕಳ, ಉಮರ್ ಕುಂಞಿ ಮುಸ್ಲಿಯಾರ್, ಶಾಫಿ ಸಖಾಫಿ ಕೊಕ್ಕಡ, ಬದ್ರುದ್ದೀನ್ ಅಹ್ಸನಿ ನೀರಕಟ್ಟೆ, ಡಿ ಹೆಚ್ ಇಬ್ರಾಹಿಂ ಸಅದಿ, ರೇಂಜ್ ಪ್ರ. ಕಾರ್ಯದರ್ಶಿ ಅಬ್ದುರ್ರಝಾಖ್ ಲತೀಫಿ ಕುಂತೂರು, ಶರೀಫ್ ಸಖಾಫಿ ನೆಕ್ಕಿಲ್, ಹಕೀಂ ಕಳಂಜಿಬೈಲು.ಎಂ ಹೆಚ್ ಕಾದರ್ ಹಾಜಿ, ಖಲಂದರ್ ಪದ್ಮುಂಜ, ಮುಸ್ತಫ ಉರುವಾಲ್ ಪದವು, ಅಂಜದಿ ಕುದ್ಲುರು, ರಹ್ಮಾನ್ ಪದ್ಮುಂಜಯ, ಬಶೀರ್ ಮದನಿ ಕೆಮ್ಮಾರ ಕೆ ಸಿ ಎಫ್ ನಾಯಕ ಕರೀಂ ಮುಸ್ಲಿಯಾರ್ ಕನ್ಯರಕೋಡಿ ಹಾಗೂ ಉಪ್ಪಿನಂಗಡಿ SJM.SMA.SYS.SSF ನ ಹಲವಾರು ಕಾರ್ಯಕರ್ತರು ಭಾಗವಹಿಸಿದರು.






