janadhvani

Kannada Online News Paper

ದುಬೈ ಬಸ್ ಪ್ರಯಾಣಿಕರ ಗಮನಕ್ಕೆ- ಇದನ್ನು ಪಾಲಿಸದಿದ್ದಲ್ಲಿ ದಂಡ

ದುಬೈ: ಬಸ್‌ನಲ್ಲಿ ಪ್ರಯಾಣ ಬೆಳೆಸುವ ವೇಳೆ ಜ್ಯೂಸ್, ಪಾಪ್ ಕಾರ್ನ್, ಚುಯಿಂಗ್‌ಗಮ್ ಮುಂತಾದವುಗಳನ್ನು ಉಪಯೊಗಿಸಿದರೆ ದಂಡ ಪಾವತಿಸಬೇಕಾದೀತು ಎಂದು ರಸ್ತೆ ಸಾರಿಗೆ ಅಥಾರಿಟಿ ತಿಳಿಸಿದೆ.

ಕುಳಿತ ಆಸನದಿಂದ ಮುಂದಿನ ಆಸನಕ್ಕೆ ಕಾಲಿಡುವುದು, ಫೋನ್, ಐಪಾಡ್, ಟ್ಯಾಬ್ ಮುಂತಾದವುಗಳ ಮೂಲಕ ಹಾಡು, ಗೇಮ್ ಮುಂತಾದವುಗಳ ಎತ್ತಿದ ಧ್ವನಿಯಿಂದ ಇತರ ಯಾತ್ರಿಕರಿಗೆ ತೊಂದರೆ ಉಂಟಾಗುವಂತೆ ಮಾಡಿದ್ದಲ್ಲಿ ದಂಡ ಪಾವತಿಸಬೇಕಾದೀತು.

ಬಸ್ ಯಾತ್ರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕ್ಯಾಂಪೈನ್ ಪ್ರಾರಂಭಿಸಲಾಗಿದೆ. ಯಾತ್ರಿಕರು ಪರಸ್ಪರ ಗೌರವ ನೀಡಬೇಕು.

ಅದೇ ರೀತಿ ಬಸ್ ಯಾತ್ರಿಕರು ಕಡ್ಡಾಯವಾಗಿಯೂ ಬೆಲ್ಟ್ ಧರಿಸಬೇಕು. ನಾಲ್ ಕಾರ್ಡ್ ಸ್ವಿಪ್ ಮಾಡದೆ ಸಂಚರಿಸಿದರೆ ಭಾರೀ ಮೊತ್ತ ದಂಡ ಪಾವತಿಸಬೇಕಾಗಿ ಬರಬಹುದು ಎಂದು ಅರ್ಟಿಎ ಅಧಿಕಾರಿಗಳು ಎಚ್ಚರಿಸಿದ್ದಾರೆ.