ಜಿದ್ದಾ: ಹಜ್ ನಿರ್ವಹಣೆಗಾಗಿ ತಲುಪುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮಿನಾದಲ್ಲಿ ಹಜ್ ಉಮ್ರಾ ಸಚಿವಾಲಯವು ಸ್ಮಾರ್ಟ್ ಕಾರ್ಡ್ ಯೊಜನೆಯನ್ನು ಪರಿಚಯುಸುತ್ತಿದೆ.
ಸ್ಮಾರ್ಟ್ ಕಾರ್ಡ್ ಯೊಜನೆಯ ಪ್ರಥಮ ಹಂತವಾಗಿ ಹಜ್ ಸೇವಾ ಕಂಪೆನಿಗಳ ಮೂಲಕ ತಲುಪಿದ 25,000 ಹಜ್ಜಾಜ್‌ಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಸ್ಮಾರ್ಟ್ ಕಾರ್ಡ್ ಎಂದರೆ ಹಾಜಿಯ ಕುರಿತ ಸಂಪೂರ್ಣ ಮಾಹಿತಿ ಇರುವ ಒಂದು ಐಡೆಂಟಿಟಿಯಾಗಿದೆ. ಅವರು ವಾಸವಿರುವ ಸ್ಥಳ, ದೇಶ, ಆರೋಗ್ಯ ಮಾಹಿತಿ ಮುಂತಾದವು ಕಾರ್ಡ್ ನಲ್ಲಿ ಅಡಕವಾಗಿರುತ್ತದೆ. ಹಾಜಿಯನ್ನು ಕ್ಷಣದಲ್ಲಿ ನಿರೀಕ್ಷಣೆಗೊಳಪಡಿಸುವುದು, ಮಿನಾದಲ್ಲಿನ ಡೇರೆಗಳಿಂದ ದಾರಿ ತಪ್ಪುವ ಹಜ್ಜಾಜ್‌ಗಳನ್ನು ಪತ್ತೆ ಹಚ್ಚುವುದಕ್ಕೂ ಸ್ಮಾರ್ಟ್ ಕಾರ್ಡ್ ಸಹಾಯಕವಾಗಲಿದೆ.
ಪ್ರಥಮ ಹಂತವಾಗಿ ಮಿನಾದಲ್ಲಿ 25, 000 ಹಜ್ಜಾಜ್‌ಗಳಿಗೆ ಮಾತ್ರ ನೀಡಲಾಗುತ್ತದೆ. ಮಿನಾದಲ್ಲಿ ಅದಕ್ಕೆ ಸಿಗ್ನಲ್ ನೀಡುವ ಯಂತ್ರಗಳು ಮತ್ತಿತರ ಉಪಕರಣಗಳು ತಲುಪುತ್ತಿದೆ. ಮುಂದಿನ ವಾರದಿಂದ ಅದು ಕಾರ್ಯಾಚರಣೆಗೊಳ್ಳಲಿದೆ. ಸ್ಮಾರ್ಟ್ ಕಾರ್ಡ್ ಫಲಪ್ರದವಾದರೆ ಮುಂದಿನ ವರ್ಷದಿಂದ ಅರಫಾ ಮತ್ತು ಮುಝ್ದಲಿಫಾದಲ್ಲೂ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವಾಲಯ ತಿಳಿಸಿದೆ.