janadhvani

Kannada Online News Paper

ನಾಳೆ: ಎಸ್ಸೆಸ್ಸೆಫ್ ನಿಂದ ಎಜ್ಯು ಸಮ್ಮಿಟ್ ಟ್ರೈನರ್ಸ್ ಟ್ರೈನಿಂಗ್

ಬಿ.ಸಿ.ರೋಡ್: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವಿಸ್ಡಂ ಟೀಮ್ ವತಿಯಿಂದ ಶಾಲಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ,ಪೋಷಕರಿಗೆ ಹಾಗೂ ಅಧ್ಯಾಪಕರಿಗೆ ನುರಿತ ತರಬೇತುದಾರರಿಂದ ತರಬೇತಿಯನ್ನು ಹಮಿಕೊಂಡಿದ್ದು.

ಅದರ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ತರಬೇತುದಾರರಿಗೆ ರಾಜ್ಯ ಮಟ್ಟದ ತರಬೇತಿ ಎಜ್ಯು ಸಮ್ಮಿಟ್ ಟ್ರೈನರ್ಸ್ ಟ್ರೈನಿಂಗ್ ಕಾರ್ಯಾಗಾರವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಮದನಿರವರ ಅಧ್ಯಕ್ಷತೆಯಲ್ಲಿ ಜೂನ್ 30 ಆದಿತ್ಯವಾರ ಬೆಳಿಗ್ಗೆ 9:00 ಗಂಟೆಯಿಂದ ಬಿ.ಸಿ.ರೋಡ್ ನ ಸ್ಪರ್ಶಾ ಹಾಲ್ ನಲ್ಲಿ ನಡೆಯಲಿರುವುದು.

ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಮಾನ್ಯ ಯು.ಟಿ.ಖಾದರ್ ಕಾರ್ಯಕ್ರಮವನ್ನು ಉಧ್ಘಾಟಿಸಲಿರುವರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಸಿ.ಟಿ.ಎಂ ಉಮ್ಮರ್ ಅಸ್ಸಖಾಫ್ ತಂಙಳ್ ಮನ್ಶರ್ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ತರಗತಿಯನ್ನು ನಡೆಸಲಿರುವರು.

ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ,ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ,ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ,ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ,ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.