ಮಕ್ಕಾ: ಜೂನ್ 28ರಿಂದ ದುಲ್‌ಹಜ್ 10ರವರೆಗೆ ಮಕ್ಕಾ ಪ್ರವೇಶವನ್ನು ನಿಯಂತ್ರಿಸಲಾಗುವುದು ಎಂದು ಮಕ್ಕಾ ವಲಯ ಗವರ್ನರೇಟ್ ವ್ಯಕ್ತಪಡಿಸಿದೆ.
ಪ್ರತೀ ವರ್ಷದಂತೆ ಈ ಬಾರಿಯೂ ಹಜ್ ಸೀಝನ್‌ನಲ್ಲಿ ಮಕ್ಕಾದ ಹತ್ತಿರದ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಗುವುದು. ಕಾರು, ಬಸ್, ಟ್ರಕ್ ಗಳು ಕೂಡ ತಪಾಸಣಾ ವ್ಯಾಪ್ತಿಗೆ ಬರಲಿದೆ. ರೈಲು ಮೂಲಕ ಮಕ್ಕಾ ಪ್ರವೇಶಕ್ಕೂ ನಿಯಂತ್ರಣವಿದೆ.
ಮಕ್ಕಾ ಮದೀನಾ ನಡುವೆ ರೈಲು ಸಂಚಾರ ಪ್ರಾರಂಭಗೊಂಡ ನಂತರದ ಪ್ರಥಮ ಹಜ್ ಸೀಝನ್ ಇದಾಗಿದೆ. ಮಕ್ಕಾ ಇಖಾಮ ಹೊಂದಿದವರು,ಹಜ್ ಸೀಝನ್ ಕೆಲಸಕ್ಕಾಗಿ ಹಾಗೂ ಇತರ ಕಾರ್ಯಗಳಿಗೆ ಮಕ್ಕಾ ಪ್ರವೇಶಿಸಲು ಅನುಮತಿ ಲಭಿಸಿದವರನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ಅನುಮತಿಸಲಾಗುವುದಿಲ್ಲ ಎಂದು ಗವರ್ನರೇಟ್ ತಿಳಿಸಿದೆ.