ರಿಯಾದ್: ಸೌದಿ ಅರೇಬಿಯಾದಲ್ಲಿ ಲಹರಿ ಪಾನೀಯಗಳನ್ನು ಅನುಮತಿಸಲಾಗಿದೆ ಎನ್ನುವ ವರದಿಯನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ. ಮದ್ಯ ಮಾರಾಟ ಮತ್ತು ಸಾರ್ವಜನಿಕ ಉಪಯೋಗಕ್ಕಾಗಿ ಅನುಮತಿ ನೀಡುವ ಯೋಜನೆ ಇಲ್ಲ.
ಅನುಮತಿಸಲಾಗಿದೆ ಎನ್ನುವ ಕಪೋಲಕಲ್ಪಿತ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿಯಲ್ಲಿ ನಿಶಾ ಕ್ಲಬ್ಗಳನ್ನು ತೆರೆಯಲಾಗುತ್ತಿದೆ ಎಂದು ಈ ಹಿಂದೆ ಪ್ರಚಾರ ಪಡಿಸಲಾಗಿತ್ತು. ಇದನ್ನು ಕೆಲವು ಪ್ರಾದೇಶಿಕ ಮಾಧ್ಯಮಗಳೂ ಪ್ರಚಾರಪಡಿಸಿದ್ದವು. ಸೌದಿ ಎನ್ಟರ್ಟೈನ್ಮೆಂಟ್ ಅಥಾರಿಟಿಯು ಈ ಬಗ್ಗೆ ಮಾಹಿತಿ ಕಳೆ ಹಾಕುವಂತೆ ಆದೇಶ ನೀಡಿದೆ.
ದೇಶವು ನವೋದಯ ಯೋಜನೆಗಳೊಂದಿಗೆ ಮುಂದಡಿ ಇಡುತ್ತಿರುವಾಗ, ಅದರಿಂದ ಹಿಮ್ಮೆಟ್ಟಿಸಲು ಅಪಪ್ರಚಾರ ಮತ್ತು ಸುಳ್ಳು ವರದಿಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂರು ವರ್ಷಗಳಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಇದರಲ್ಲಿ ಕೊನೆಯಾದಾಗಿ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವ ಯೋಜನೆ ಕೂಡ ಜಾರಿಯಾಗಿದ್ದವು. ಅದೇ ರೀತಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಯಾವ ಬದಲಾವಣೆಗಳನ್ನು ತಂದರೂ ಅದೆಲ್ಲವೂ ಇಸ್ಲಾಮಿನ ಅನುಷ್ಠಾನ ಮತ್ತು ಮೌಲ್ಯಗಳ ಅನುಸಾರವಾಗಿ ಜಾರಿಯಾಗಲಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.