ಯುಎಇಯಲ್ಲಿ ಬಿಸಿಲಿನ ತಾಪ ಏರುತ್ತಿದೆ: ಮುಂಜಾಗ್ರತಾ ಕ್ರಮವನ್ನು ಪಾಲಿಸಿ

ಅಬುಧಾಬಿ: ಯುಎಇಯಲ್ಲಿ ಬಿಸಿಲಿನ ತಾಪ ಏರುತ್ತಿದೆ. ಮುಂದಿನ ದಿನಗಳಲ್ಲಿ ತಾಪಮಾನವು ಸರಾಸರಿ ಏರಲಿದೆ. ಆದರೆ ಅದು ಶೇ. 50ರಷ್ಟು ಏರಲಿದೆ ಎನ್ನುವ ರೀತಿಯಲ್ಲಿ ಜಾಲತಾಣಗಳ ಮೂಲಕ ಸುದ್ದಿ ಹರಡುತ್ತಿದ್ದು, ಆ ವರದಿಯು ಹಿಂದಿನ ವರ್ಷಗಳಲ್ಲಿ ಹೊರಡಿಸಲಾದ ವರದಿಯಾಗಿವೆ ಎಂದು ಆರೋಗ್ಯ- ರಕ್ಷಣಾ ಸಚಿವಾಲಯ ವ್ಯಕ್ತಪಡಿಸಿದ್ದು, ಇಂತಹ ಎಚ್ಚರಿಕೆಯನ್ನು ಈ ಬಾರಿ ಸಚಿವಾಲಯ ಹೊರಡಿಸಿಲ್ಲ ಎಂದಿದೆ.

ಬಿಸಿಲಿನ ತಾಪ ಏರುವ ಸನ್ನಿವೇಶದಲ್ಲಿ ಪಾಲಿಸ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ವಿಶ್ವ ಆರೋಗ್ಯ ಸಂಘಟನೆ ಹೊರಡಿಸಿದೆ. ವಾಸವಿರುವ ಸ್ಥಳಗಳಲ್ಲಿ ತಂಪಿನ ವಾತಾವರಣವನ್ನು ಕಾಯ್ದಿರಿಸುವುದು ಅತ್ಯಾವಶ್ಯಕ. ಎ.ಸಿ.ಯನ್ನು ಹಗಲು ಹೊತ್ತಿನಲ್ಲಿ 32 ಡಿಗ್ರಿ ಮತ್ತು ರಾತ್ರಿ ಹೊತ್ತು 24 ಡಿಗ್ರಿಗೆ ಕ್ರಮೀಕರಿಸಬೇಕು. ಮಕ್ಕಳು ಮತ್ತು ಅರುವತ್ತಕ್ಕಿಂತ ಹೆಚ್ಚಿನ ಪ್ರಾಯ ಇರುವವರು ಇರುವ ಕಡೆ ಈ ಕ್ರಮೀಕರಣ ಅವಶ್ಯಕವಾಗಿದೆ. ಸೂರ್ಯತಾಪವು ನೇರವಾಗಿ ಬಡಿಯುವ ಕಡೆ
ಪರದೆಯನ್ನು ಹಾಕಬೇಕು.

ನೆನಸಿದ ಬಟ್ಟೆಗಳ ಮೂಲಕವೂ ಬಿಸಿಲು ಬಡಿಯುವ ಸ್ಥಳವನ್ನು ಮರೆಮಾಚಬಹುದು. ಆದರೆ ಅದು ತಾಪಮಾನ ಏರುವುದಕ್ಕೆ ಕಾರಣವಾಗಬಹುದು. ಹೆಚ್ಚು ನೀರು ಕುಡಿಯಬೇಕು. ಬಿಸಿಲಲ್ಲಿ ಹೊರಗೆ ಹೋಗುವುದು ಕಡಿಮೆಗೊಳಿಸಬೇಕು. ಕಠಿಣ ವ್ಯಾಯಾಮ ಮಾಡುವವರು ಬೆಳಗ್ಗೆ 4ರಿಂದ ಏಳರ ವರೆಗಿನ ಸಮಯವನ್ನು ಆಯ್ಕೆ ಮಾಡಬೇಕು. ಯಾವಾಗಲೂ ನೆರಳಲ್ಲೇ ನಿಲ್ಲುವಂತೆ ಎಚ್ಚರ ವಹಿಸುವುದು ಸೂಕ್ತ.

ಮಕ್ಕಳು ಮತ್ತು ಸಾಕು ಪ್ರಾಣಿಗಳನ್ನು ನಿಲ್ಲಿಸಿದ ವಾಹನದಲ್ಲಿ ಬಿಡಬಾರದು. ತಂಪು ನೀರು ಕುಡಿಯುವುದು, ವಾಯು ಸಂಚಾರವಿರುವ ಬಟ್ಟೆಗಳನ್ನು ಉಪಯೋಗಿಸುವುದು ಉತ್ತಮ. ಟೋಪಿ ಮತ್ತು ಸನ್ ಗ್ಲಾಸ್ ಉಪಯೋಗಿಸಿರಿ. ಕಡು ವರ್ಣವಲ್ಲದ ಬಟ್ಟೆಗಳನ್ನು ಉಪಯೋಗಿಸಿರಿ. ಕಫೀನ್, ಸಕ್ಕರೆ ಮುಂತಾದವುಗಳ ಉಪಯೋಗ ತ್ಯಜಿಸಿರಿ. ಪ್ರೊಟೀನ್‌ ಅಧಿಕವಿರುವ ಆಹಾರವನ್ನು ತ್ಯಜಿಸಿ, ಬೇಗನೇ ದಹಿಸುವಂತಹ ಜಲಾಂಶ ಜಾಸ್ತಿ ಇರುವ ಆಹಾರವನ್ನು ಕ್ರಮೀಕರಿಸಿ ಮುಂತಾದ ಕ್ರಮಗಳನ್ನು ವಿಶ್ವ ಆರೋಗ್ಯ ಸಂಘಟನೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!