ಮಕ್ಕಾ: ಮಕ್ಕಾ-ಮದೀನಾ ನಡುವೆ ಸಂಚರಿಸುವ ಹರಮೈನ್ ರೈಲುಗಳು ಇನ್ನು ಮುಂದೆ ಎರಡೂ ಕಡೆಯಿಂದ ಎರಡು ರೈಲುಗಳಂತೆ ಸಂಚರಿಸಲಿದೆ. ಜನದಟ್ಟಣೆ ಇರುವ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ಶೆಡ್ಯೂಲ್ ಜಾರಿಯಾಗಿದ್ದು, ಯಾತ್ರಿಕರಿಗೆ ಇದು ಅನುಕೂಲವಾಗಲಿದೆ.
ಪ್ರತೀ ದಿನದ ಶೆಡ್ಯೂಲ್ ಪ್ರಕಾರ ಹತ್ತು ರೈಲು ಗಾಡಿಗಳು ಸಂಚಾರ ನಡೆಸಲಿದ್ದು, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ದಿನಗಳಲ್ಲಿ ಐದು ಸರ್ವೀಸ್ ಗಳು ನಡೆಸುತ್ತಿದ್ದವು, ಇದೀಗ ಎರಡೂ ದಿಕ್ಕುಗಳಿಂದ ಎರಡೆರಡು ರೈಲುಗಳು ಸಂಚಾರ ನಡೆಸುವ ಕಾರಣ ಒಟ್ಟು 834 ಯಾತ್ರಿಕರಿಗೆ ಸಂಚರಿಸಬಹುದಾಗಿದೆ.
3 ಕ್ಯಾಬಿನ್ಗಳಲ್ಲಿ 417 ಸೀಟುಗಳನ್ನು ಹೊಂದಿರುವ ರೈಲುಗಳು ಪ್ರಸಕ್ತ ಸಂಚಾರ ನಡೆಸುತ್ತಿವೆ.ಈಗಾಗಲೇ ನಾಲ್ಕು ಲಕ್ಷ ಯಾತ್ರಿಕರು ಇದರ ಸದುಪಯೋಗ ಪಡೆದಿದ್ದಾರೆ. ಜಿದ್ದಾ, ಮದೀನಾ, ರಾಬಿಗ್ ಮುಂತಾದೆಡೆ ಪ್ರಧಾನ ನಿಲುಗಡೆ ಇದ್ದು, ಜಿದ್ದಾ ವಿಮಾನ ನಿಲ್ದಾಣದಲ್ಲೂ ರೈಲು ನಿಲ್ದಾಣದ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ.