janadhvani

Kannada Online News Paper

ಯುಎಇ:ಮೌಲ್ಯವರ್ಧಿತ ತೆರಿಗೆ ಮರಳಿಸಲು ‘ವ್ಯಾಟ್ ರಿಟರ್ನ್ ಕಿಯೊಸ್ಕ್’

ಈ ವರದಿಯ ಧ್ವನಿಯನ್ನು ಆಲಿಸಿ


ಅಬುಧಾಬಿ: ಯುಎಇ ಸಂದರ್ಶನಗೈದು ಮರಳುವವರಿಗೆ ಮೌಲ್ಯವರ್ಧಿತ ತೆರಿಗೆ ವ್ಯಾಟ್, ರಿಟರ್ನ್ ಗಾಗಿ ಇನ್ನು ಮುಂದೆ ಕಚೇರಿಯಲ್ಲಿ ಅಧಿಕಾರಿಗಳನ್ನು ಕಾಯಬೆಕಾಗಿಲ್ಲ. ವ್ಯಾಟ್ ರಿಟರ್ನ್ ಮಿಷನ್ ಜಾರಿಗೆ ಬಂದಿದ್ದು, ಯುಎಇ ಎಮಿರೇಟ್ಸ್‌ಗಳಾದ್ಯಂತ ಎಟಿಎಂ ಮಾದರಿಯ ಮೆಷನ್‌ಗಳು ಕಾರ್ಯಾರಂಭಗೊಂಡಿದೆ.

ಕಾರ್ಯ ಚಟುವಟಿಕೆಗಳನ್ನು ವೇಗವಾಗಿ ಮತ್ತು ಸುಲಭದಲ್ಲಿ ನಿರ್ವಹಿಸುವುದು ಈ ಮೂಲಕ‌ ಸಾಧ್ಯವಾಗಲಿದೆ. ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಈ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ವಹಿವಾಟುಗಳನ್ನು ಪರಿಶೋಧಿಸಿದ ನಂತರ ಮೊತ್ತವನ್ನು ಖಾತೆಗೆ ಜಮಾವಣೆ ಮಾಡುವ ವಿಧಾನವನ್ನು ಯಂತ್ರ ಸ್ವೀಕರಿಸಲಿದೆ ಎಂದು ಫೆಡರಲ್ ಟಾಕ್ಸ್ ಅಥಾರಿಟಿ ಡೈರೆಕ್ಟರ್ ಜನರಲ್ ಖಾಲಿದ್ ಅಲಿ ಅಲ್ ಬುಸ್ತಾನಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com