janadhvani

Kannada Online News Paper

ಮೋದಿ ಭಾಯ್ ಎಂದು ಮುಸ್ಲಿಮರು ಮತ ನೀಡಿದ್ದಾರೆ- ಕೆ.ಎಸ್​ ಈಶ್ವರಪ್ಪ

ಬಾಗಲಕೋಟೆ(ಜೂನ್​​.08): ಕಮ್ಯುನಿಸ್ಟ್​, ಕ್ರಿಶ್ಚಿಯನ್ ರಾಷ್ಟ್ರಗಳು ನರೇಂದ್ರ ಮೋದಿಯವರಿಗೆ ಭಾಯ್ ಅನ್ನುತ್ತಾರೆ. ಮುಸ್ಲಿಮರು ಇವತ್ತು ಭಾರತ್ ಮಾತಾಕಿ ಜೈ ಮತ್ತು ವಂದೇ ಮಾತರಂ ಎನ್ನುತ್ತಿದ್ದಾರೆ. ಈ ಮಧ್ಯೆ ಇನ್ನು ಕೆಲವರು ಪಾಕಿಸ್ತಾನ ಜಿಂದಾಬಾದ್ ಎನ್ನುವವವರೂ ಇದ್ದಾರೆ. ಅದೇ ವೇಳೆ ಮುಸ್ಲಿಂ ಮಹಿಳೆಯರೇ ನರೇಂದ್ರ ಮೋದಿ ಭಾಯ್ ಎಂದು ಮತ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್​ ಈಶ್ವರಪ್ಪ ತಮ್ಮ ಗೆಲುವನ್ನು ಕೊಂಡಾಡಿದರು.

ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತಾಡಿದ ಇವರು ಎಂದಿನಂತೆಯೇ ಕಾಂಗ್ರೆಸ್ ಮತ್ತು​ ಜೆಡಿಎಸ್​​ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ದೇವೆಗೌಡರು ಏನಂದ್ರು? ಒಕ್ಕಲಿಗರು ಜೆಡಿಎಸ್​ಗೆ ಮತ ಹಾಕುತ್ತಾರೆ ಎಂದಿದ್ದರು. ಈಗ ನಿಖಿಲ್​​ ಎಲ್ಲಿದ್ದೀಯಪ್ಪಾ ಬದಲಿಗೆ ದೇವೇಗೌಡರೇ ಎಲ್ಲಿದಿರಪ್ಪಾ? ಎನ್ನುವಂತಹ ಪರಿಸ್ಥಿತಿ ಬಂದಿದೆ ಎಂದು ಕುಟುಕಿದ್ದಾರೆ.

ಇನ್ನು ಒಕ್ಕಲಿಗರು ಎಂದು ಸೊಲ್ಲೆತ್ತಬೇಡಿ. ಒಂದು ವೇಳೆ ಅದೇ ಸುದ್ದಿ ಮಾತಾಡಿದ್ರೆ ನಿಖಿಲ್ ಎಲ್ಲಿದಿಯಪ್ಪಾ ಅಷ್ಟೇ ಅಲ್ಲ, ದೇವೇಗೌಡರು ಎಲ್ಲಿದಿರಪ್ಪಾ? ಎನ್ನುವಂತಹ ಪರಿಸ್ಥಿತಿ ಮತ್ತೊಮ್ಮೆ ಬರುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯನವರೇ ರಾಜ್ಯದಲ್ಲಿ ಜಾತಿ ವಿಷಬೀಜ ಬಿತ್ತಿದ್ರು. ರಾಜ್ಯದ ಕುರುಬರೆಲ್ಲ ನಮ್ಮ ಜೊತೆ ಇದ್ದಾರೆ ಅಂದರು.‌ ಇಂತವರಿಗೆ ಮೈಸೂರು, ಚಾಮುಂಡೇಶ್ವರಿ, ಅಷ್ಟೇ ಅಲ್ಲ ಬಾದಾಮಿಯಲ್ಲೂ ಬುದ್ದಿ ಕಲಿಸಿದ್ದಾರೆ ಎಂದು ಕೆ.ಎಸ್​​ ಈಶ್ವರಪ್ಪ ಕಿಡಿಕಾರಿದರು.

ಮೋದಿ ಪ್ರಧಾನಿ ಆದ ಬಳಿಕ ಕಾಂಗ್ರೆಸ್ ಶಾಸಕರಿಗೆ ಈ ರೀತಿ ಅನಿಸ್ತಿದೆ. ಸಿದ್ದರಾಮಯ್ಯ ದುರಹಂಕಾರಿ, ದಿನೇಶ್​​ ಗುಂಡೂರಾವ್ ಅಸಮರ್ಥ ನಾಯಕ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಬಾಗಲಕೋಟೆ ಕಾಂಗ್ರೆಸ್​ ಅಭ್ಯರ್ಥಿ ಕಿತ್ತೂರು ರಾಣಿ ಚೆನ್ನಮ್ಮನ ರಕ್ತ ನಮ್ಮದು ಎಂದು ಪ್ರಚಾರ ಮಾಡಿದ್ರು, ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ನಾವೇ ಅದೇ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನದಿಂದ ದಿಗ್ವಿಜಯ ಸಾಧಿಸಿದೆವು ಎಂದರು.

error: Content is protected !! Not allowed copy content from janadhvani.com