ಖುದ್ಸ್ ರಾಜಧಾನಿಯಾಗಿ ಪ್ಯಾಲೆಸ್ತೀನ್ ರೂಪುಗೊಳ್ಳುವ ತನಕ ಬೆಂಬಲ ಮುಂದುವರಿಕೆ

ಮಕ್ಕಾ: ಜೆರುಸಲೇಮ್ ರಾಜಧಾನಿಯಾಗಿ ಪ್ಯಾಲೆಸ್ತೀನ್ ದೇಶ ರೂಪುಗೊಳ್ಳುವ ತನಕ ಅವರಿಗೆ ತಮ್ಮ ಬೆಂಬಲವನ್ನು ಮುಂದುವರಿಸುವುದಾಗಿ ಮಕ್ಕಾದಲ್ಲಿ ನಡೆದ ಇಸ್ಲಾಮಿಕ್ ಶೃಂಗಸಭೆಯು ಘೋಷಿಸಿದೆ.

ಜೆರುಸಲೆಮ್ ರಾಜಧಾನಿಯಾಗಿ ಇಸ್ರೇಲ್ ರಾಷ್ಟ್ರ ನಿರ್ಮಾಣದ ಯುಎಸ್ ಬೇಡಿಕೆಯನ್ನು ಶೃಂಗಸಭೆ ತಿರಸ್ಕರಿಸಿದೆ. ಪ್ರಪಂಚದಾದ್ಯಂತ ನಿರಾಶ್ರಿತರಾಗಿರುವವರ ಪೈಕಿ ಬಹುಸಂಖ್ಯಾತರು ಮುಸ್ಲಿಮರು ಎನ್ನುವ ಕಟುಸತ್ಯದ ಕುರಿತು ಶೃಂಗಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.

ಇರಾನಿನ ನಂತರ ಅತ್ಯಂತ ಸಕ್ರಿಯವಾದ ವಿಷಯವಾಗಿತ್ತು ಪ್ಯಾಲೆಸ್ತೀನ್. ಟರ್ಕಿಯ ವಿದೇಶಾಂಗ ಸಚಿವರು 1967 ರ ಗಡಿಯನುಸಾರ ಜೆರುಸಲೆಂ ರಾಜಧಾನಿಯಾಗಿರುವ ಪ್ಯಾಲೆಸ್ತೀನ್ ದೇಶದ ನಿರ್ಮಾಣಕ್ಕಾಗಿ ಶೃಂಗಸಭೆಯಲ್ಲಿ ಒತ್ತಾಯಿಸಿದರು. ಜೆರುಸಲೆಂ ರಾಜಧಾನಿಯಾಗಿರುವ ಪ್ಯಾಲೆಸ್ತೀನ್ ರಾಜ್ಯದ ರಚನೆಯಾಗುವವರೆಗೆ ಸಂಘಟನೆ ಬೆಂಬಲವನ್ನು ಘೋಷಿಸಿತು.

ಬೆಂಬಲವನ್ನು ಘೋಷಿಸಿದ ಶೃಂಗಸಭೆಯು
ಜೆರುಸಲೇಂನಲ್ಲಿ ಯುಎಸ್‌ನ ಇಸ್ರೇಲ್ ದೂತಾವಾಸವನ್ನು ತಿರಸ್ಕರಿಸಿತು. ಸಿರಿಯಾದಲ್ಲಿ ರಾಜಕೀಯ ಪರಿಹಾರಕ್ಕಾಗಿ ಮಾಡಲಾಗುವ ಪ್ರಯತ್ನ ಮುಂದುವರಿಯಲಿದೆ, ರೋಹಿಂಗ್ಯನ್ನರಿಗೆ ಸಾಕಷ್ಟು ಬೆಂಬಲ ನೀಡಲಾಗುತ್ತದೆ, ಇಸ್ಲಾಮೋಫೋಬಿಯಾವನ್ನು ಎದುರಿಸಲು ಒಗ್ಗಟ್ಟಾದ ಪ್ರಯತ್ನ ಮುಂದುವರಿಯಲಿದೆ.

ವಿಶ್ವದಲ್ಲಿ ಭಾರೀ ಸಂಖ್ಯೆಯಲ್ಲಿರುವ ಮುಸ್ಲಿಂ ನಿರಾಶ್ರಿತರನ್ನು ಸಹಾಯ ಮಾಡಲು ಶೃಂಗಸಭೆಯು ಜಂಟಿ ಪ್ರಯತ್ನ ಮಾಡಲಾಗುವುದಾಗಿ ಘೋಷಿಸಿದ್ದು, ಮ್ಯಾನ್ಮಾರ್ ನಲ್ಲಿನ ರೋಹಿಂಗ್ಯನ್ನರಿಗೆ ಜಂಟಿ ಸಹಭಾಗಿತ್ವದ ಸಹಾಯ ಮುಂದುವರಿಸಲು ನಿರ್ಧರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!