janadhvani

Kannada Online News Paper

ಸೌದಿ: ಖಾಸಗಿ ವಲಯದಲ್ಲಿ ನಾಲ್ಕು ದಿನ ಈದ್ ರಜೆ

ರಿಯಾದ್: ಖಾಸಗಿ ವಲಯದ ಸಿಬ್ಬಂದಿಗೆ ನಾಲ್ಕು ದಿನ ಈದ್ ರಜಾದಿನವಾಗಿ ಅಧಿಕೃತರು ಘೋಷಿಸಿದ್ದಾರೆ.ಈದುಲ್ ಫಿತರ್ ರಮಝಾನ್ 29ರಿಂದ ಪ್ರಾರಂಭವಾಗಲಿದ್ದು, ಬಕ್ರೀದ್ ರಜೆಯು ಅರಫಾ ದಿನದಿಂದ ಪ್ರಾರಂಭಗೊಳ್ಳಲಿದೆ.

ಕಾರ್ಮಿಕ, ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಉಮ್ಮುಲ್ ಖುರಾ ಕ್ಯಾಲೆಂಡರ್ ಪ್ರಕಾರ ರಮಝಾನ್ ಇಪ್ಪತ್ತೊಂಬತ್ರರ ನಂತರ ನಿರಂತರವಾಗಿ ನಾಲ್ಕು ದಿನಗಳು ಈದುಲ್ ಫಿತರ್‌ನ ಕನಿಷ್ಠ ರಜೆಯಾಗಿದೆ.

ದೇಶದ ಸ್ವಾತಂತ್ರೋತ್ಸವ ರಜೆ ನೀಡುವ ಬಗೆಗಿನ ನಿರ್ದೇಶನಗಳನ್ನೂ ಸಚಿವಾಲಯ ನೀಡಿದೆ. ಸೆ.23ಕ್ಕೆ ಬರುವ ದೇಶೀಯದಿನ ಯಾವುದೇ ವಾರದ ರಜಾದಿನದಲ್ಲಿ ಬರುವುದಾದರೆ ಮತ್ತೊಂದು ದಿನ ಹೆಚ್ಚುವರಿಯಾಗಿ ರಜೆ ನೀಡುವಂತೆಯೂ, ಈದ್ ರಜೆಯ ದಿನಗಳಲ್ಲಿ ಬರುವುದಾದರೆ, ಹೆಚ್ಚುವರಿಯಾಗಿ ರಜೆ ನೀಡಬೇಕಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ.