ದೋಹಾ: ಕತರ್‌ನಲ್ಲಿ ವಾಟ್ಸ್ ಆ್ಯಪ್ ವಾಯ್ಸ್ ಮತ್ತು ವೀಡಿಯೋ ಕರೆಗೆ ಏರ್ಪಡಿಸಲಾಗಿದ್ದ ನಿಯಂತ್ರಣವನ್ನು ಹಿಂಪಡೆಯಲಾಗಿದೆ. ಇತ್ತೀಚೆಗೆ ವಾಟ್ಸ್ ಆ್ಯಪ್ ಕರೆಗಳು ಲಭ್ಯವಾಗತೊಡಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದಾರೆ. ಆದರೆ ಈ ಬಗ್ಗೆ ಖಚಿತವಾದ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಈ ಹಿಂದೆ ಲಭ್ಯವಿದ್ದ ವಾಟ್ಸ್ ಆಪ್ ಆಡಿಯೋ- ವೀಡಿಯೋ ಸೌಲಭ್ಯವನ್ನು 2017ರಿಂದ ತಡೆಯಲಾಗಿತ್ತು. ತದನಂತರ ಮೆಸೇಜ್, ವೀಡಿಯೋ, ಫೋಟೊ ಗಳನ್ನು ಕಳುಗಿಸುವುದು ಮಾತ್ರ ಸಾಧ್ಯವಾಗಿತ್ತು.
ವಾಟ್ಸ್ ಆಪ್ ಹೊರತಾಗಿ, ಫೇಸ್ ಟೈಮ್, ಸ್ಕೈಪ್, ವೈಬರ್ ಮುಂತಾದ ಆ್ಯಪ್‌ಗಳು ಕೂಡ ಕತರ್‌ನಲ್ಲಿ ಲಭ್ಯವಿರಲಿಲ್ಲ. ಇವುಗಳು ಕಾರ್ಯಾಚರಿಸುತ್ತಿದೆಯೇ ಎನ್ನುವ ಮಾಹಿತಿ ಕೂಡ ಲಭ್ಯವಿಲ್ಲ.
ಊರಿಗೆ ಕಡಿಮೆ ವೆಚ್ಚದಲ್ಲಿ ಕರೆ ಮಾಡುವುದು ಸಾಧ್ಯ ಎನ್ನುವ ದಿಶೆಯಲ್ಲಿ ಅನಿವಾಸಿಗಳಿಗೆ ಆ್ಯಪ್‌ಗಳು ವರವಾಗಿದೆ. ಈ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ ಹಲವಾರು ಅನಿವಾಸಿಯರು ಜಾಲತಾಣದಲ್ಲಿ ಪೊಸ್ಟ್ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
ನಾಲ್ಕನೇ ವರ್ಷಕ್ಕೆ ಕಾಲಿಟ್ಟ ತ್ವಾಯಿಫ್ ಫೈಟರ್ಸ್ ಹೆಲ್ಪ್’ಲೈನ್
ಸ್ವತಂತ್ರ ಪ್ಯಾಲಸ್ತೀನ್ ನಿರ್ಮಾಣಗೊಳ್ಳದೆ ಇಸ್ರೇಲ್ ಜೊತೆ ಶಾಂತಿ ಒಪ್ಪಂದಕ್ಕಿಲ್ಲ- ಸೌದಿ ಅರೇಬಿಯಾ
ಚುನಾವಣಾ ಗುರುತಿನ ಚೀಟಿ: ಡಿಜಿಟಲ್ ಆವೃತಿ ನಾಳೆಯಿಂದ ಲಭ್ಯ
ದೇಶಾದ್ಯಂತ ಕೋವಿಡ್ ಲಸಿಕೆ ವಿತರಣೆ: ಒಂದೇ ದಿನದಲ್ಲಿ 6 ಮಂದಿ ಸಾವು
ಕಾಣಿಕೆ ಡಬ್ಬಿಗೆ ಅವಹೇಳನೆ: ಶಾಂತಿ ಕದಡಲು ಯತ್ನಿಸಿಸುವವರನ್ನು ಬಂಧಿಸಿ- ಯು.ಟಿ ಖಾದರ್
ಇಂಧನ ಬೆಲೆ ನಿರಂತರ ಏರಿಕೆ: ಜನಸಾಮಾನ್ಯರ ಗೋಳು ಕೇಳುವವರಿಲ್ಲ