janadhvani

Kannada Online News Paper

ಭಾರತದ ಗ್ರ್ಯಾಂಡ್ ಮುಫ್ತಿ ಇಂದು ರಾಜ್ಯ ರಾಜಧಾನಿ ಬೆಂಗಳೂರಿಗೆ

ಬೆಂಗಳೂರು: ಪವಿತ್ರ ರಮಳಾನ್ ತಿಂಗಳ 23ನೇ ರಾತ್ರಿ 28-05-2019 ಮಂಗಳವಾರ ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆಯಲಿರುವ ಗ್ರಾಂಡ್ ರೂಹಾನಿ ಇಜ್ತಿಮಾ, ಬೃಹತ್ ಹನಫಿ, ಶಾಫಿ ಪ್ರಾರ್ಥನಾ ಸಂಗಮದಲ್ಲಿ ಭಾರತೀಯ ಮುಸ್ಲಿಮರ ಸುಲ್ತಾನ್ ಭಾರತದ ಗ್ರ್ಯಾಂಡ್ ಮಫ್ತಿಯಾಗಿ ನೇಮಕಗೊಂಡ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಗ್ರಾಂಡ್ ಮುಫ್ತಿಯಾಗಿ ನೇಮಕಗೊಂಡ ಬಳಿಕ ಪ್ರಥಮ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರಿಗೆ ಬೆಂಗಳೂರಿನ ಸುನ್ನೀ ಸಂಘಟನೆಗಳ ಒಕ್ಕೂಟದಿಂದ ಅದ್ದೂರಿ ಪುರಸ್ಕಾರ ಸಮಾರಂಭ ನಡೆಯಲಿದೆ.ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾತ್ ಕೋಶಾಧಿಕಾರಿ. ಎಸ್ ಎಸ್ ಎ ಖಾದರ್ ಹಾಜಿ ವಹಿಸಲಿದ್ದಾರೆ.ಅಸ್ಸಯ್ಯಿದ್ ಕುರಿಕುಝಿ ತಂಙಲ್ ಅವರು ಆತ್ಮೀಯ ಸಂಗಮಕ್ಕೆ ನೇತೃತ್ವ ನೀಡಲಿದ್ದಾರೆ.

ಸಮಾರಂಭದಲ್ಲಿ ಮೌಲಾನಾ ಗುಲಾಂ ಗೌಸೆ ಸಿದ್ದಿಕಿ ಖಿಬ್ಲ ಕಾಝಿ ಬಳ್ಳಾರಿ ಹಾಗೂ ಕರ್ನಾಟಕ ಮುಸ್ಲಿಂ ಜಮಾತ್ ಅಧ್ಯಕ್ಷರಾದ ಮೌಲಾನಾ ಸಂಶುಲ್ ಹಕ್ ಖಾದ್ರಿ ಅಲ್ ಹಸನಿ ವಲ್ ಹುಸೈನಿ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ.ಎಮ್ ಶಾಫಿ ಸಅದಿ, ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಜಿ.ಎಂ.ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಸ್ಸಯ್ಯಿದ್ ಮನ್ಶರ್ ತಂಙಳ್, ಎಸ್.ಎಮ್.ಎ, ಎಸ್.ಜೆ.ಎಂ, ಎಸ್.ಜೆ.ಯು ರಾಜ್ಯ ಹಾಗೂ ಜಿಲ್ಲಾ ನಾಯಕರ ಸಹಿತ ಸುನ್ನೀ ಸಂಘಟನೆಗಳ ಒಕ್ಕೂಟದ ಹಲವಾರು ಉಲಮಾ ಉಮರಾ ಸಾದಾತುಗಳು ಭಾಗವಹಿಸಲಿದ್ದಾರೆಂದು ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com