janadhvani

Kannada Online News Paper

“ಸೋಲಿನಲ್ಲೂ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆಯಿದೆ”ಸೋನಿಯಾ ಗಾಂಧಿಯ ಪತ್ರಿಕಾ ಪ್ರಕಟಣೆ ಬಿಡುಗಡೆ

ನವದೆಹಲಿ: 17ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವು ಹೀನಾಯ ಸೋಲು ಹಿನ್ನೆಲೆಯಲ್ಲಿ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ನೀವೆಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದೀರ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿದ್ದಕ್ಕೆ ನಿಮಗೆ ಅಭಾರಿಯಾಗಿದ್ದೇನೆ. ಆದರೂ ಚುನಾವಣೆಯಲ್ಲಿ ನಿರೀಕ್ಷಿತ ಗುರಿ ಮುಟ್ಟಿಲ್ಲ, ಸೋತಿದ್ದೇವೆಂಬ ಮಾತ್ರಕ್ಕೆ ಯಾರೂ ಧೃತಿಗೆಡಬಾರದು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಕಿವಿಮಾತು ಹೇಳಿದ್ದಾರೆ.

ಅಲ್ಲದೇ ಕಾಂಗ್ರೆಸ್ ಪರಂಪರಾಗತ ಹೋರಾಟಗಾರರ ಪಕ್ಷವಾಗಿದೆ. ನನಗೆ ತುಂಬು ವಿಶ್ವಾಸವಿದೆ. ದೇಶದ ಜನ ನಮ್ಮನ್ನ ಕೈಬಿಡುವುದಿಲ್ಲ, ಯಾರೂ ಅಧೀರರಾಗಬಾರದು, ನಮ್ಮ ಮೈತ್ರಿ ಪಕ್ಷಗಳು ಧೃತಿಗೆಡಬಾರದು. ಸೋಲಿನಲ್ಲೂ ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ನಾವು ಮತ್ತಷ್ಟು ಶಕ್ತಿಯಿಂದ ಪಕ್ಷ ಕಟ್ಟೋಣ ಕಾಂಗ್ರೆಸ್, ನಾಯಕರು, ಕಾರ್ಯಕರ್ತರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಸೋನಿಯಾ ಗಾಂಧಿ ಅವರು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.