janadhvani

Kannada Online News Paper

ಮುಡಿಪು ಡಿವಿಶನ್ : ತರ್‌ತೀಲ್ 19

ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಕ್ಯಾಂಪಸ್ ವತಿಯಿಂದ ತರ್‌ತೀಲ್-19 ಕಾರ್ಯಕ್ರಮವು ಮುಡಿಪು ಡಿವಿಶನ್ ಅಧ್ಯಕ್ಷ ತೌಸೀಫ್ ಸ‌ಅದಿ ಹರೇಕಳ ರವರ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ರಹ್ಮಾನಿಯ ಮದ್ರಸದಲ್ಲಿ ನಡೆಯಿತು.

ಡಿವಿಶನ್ ಉಪಾಧ್ಯಕ್ಷ ಇಬ್ರಾಹಿಂ ಅಹ್ಸನಿ ಮಂಜನಾಡಿ ಸಭೆಯನ್ನು ಉದ್ಘಾಟಿಸಿದರು. ಡಿವಿಶನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ, ತೀರ್ಪುಗಾರರಾದ ಹಾಫಿಳ್ ಅನ್ಸಾರ್ ಸ‌ಅದಿ ಬಡಕಬೈಲ್, ಇರ್ಫಾನ್ ಮದನಿ ಹಳೆಕೋಟೆ ಮಾತನಾಡಿದರು. ಡಿವಿಶನ್ ನಾಯಕರಾದ ನೌಶಾದ್ ಮದನಿ ಎಚ್.ಕಲ್, ಝೈನುದ್ದೀನ್ ಇರಾ, ಶರೀಫ್ ಪಾಣೇಲ, ಕೆರೀಂ ಸಖಾಫಿ ಮುಂತಾದವರು ಉಪಸ್ಥಿತರಿದ್ದರು.

ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಅಬೂಸಾಲಿಹ್ ಹರೇಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.