ನವದೆಹಲಿ: ಚುನಾವಣೋತ್ತರ ಫಲಿತಾಂಶವನ್ನ ನಾನು ನಂಬುವುದಿಲ್ಲ, ಇದು ಇವಿಎಂ ಮಷಿನ್ಗಳನ್ನ ಬದಲಿಸುವ ತಂತ್ರವಾಗಿದೆ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಟ್ವಿಟರ್ ಬಾಂಬ್ ಸಿಡಿಸಿದ್ದಾರೆ.
ಸದ್ಯ, ದೇಶದಲ್ಲಿ ಎಕ್ಸಿಟ್ ಪೋಲ್ ಫಲಿತಾಂಶದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಇದರ ಮಧ್ಯೆ ಕೆಲವು ರಾಜಕೀಯ ಪಕ್ಷಗಳಿಗೆ ಎಕ್ಸಿಟ್ ಪೋಲ್ ಫಲಿತಾಂಶದಿಂದಾಗಿ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ. ತಾವೇ ಗೆಲುವು ಸಾಧಿಸೋದು ಅಂತಾ ಬಲವಾಗಿ ನಂಬಿದ್ದ ರಾಜಕೀಯ ನಾಯಕರಿಗೆ ಶಾಕ್ ಆಗಿದ್ದು, ಚುನಾವಣೋತ್ತರ ಫಲಿತಾಂಶದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಅರ್ಥವನ್ನ ಕಲ್ಪಿಸಿ ಮಾತನಾಡುತ್ತಿದ್ದಾರೆ.
ಅದರಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ, ‘ನಾನು ಎಕ್ಸಿಟ್ ಪೋಲ್ನ ಗಾಸಿಪ್ ನ್ನು ನಂಬಲ್ಲ. ಈ ರೀತಿಯ ಗಾಸಿಪ್ ಮಾಡಿ ಎವಿಎಂ ಮಷಿನ್ಗಳನ್ನ ಬದಲಾವಣೆ ಮಾಡುವ ತಂತ್ರವಾಗಿದೆ. ನಾನು ವಿಪಕ್ಷಗಳಿಗೆ ಮನವಿ ಮಾಡಿಕೊಳ್ಳುವುದೇನಂದರೆ ನಾವೆಲ್ಲರೂ ಒಗ್ಗಟ್ಟಾಗಿರೋಣ. ಎಲ್ಲರೂ ಒಟ್ಟಿಗೆ ಹೋರಾಡೋಣ ಅಂತಾ ಟ್ವೀಟ್ ಮಾಡಿದ್ದಾರೆ.