janadhvani

Kannada Online News Paper

ಕೆದುಂಬಾಡಿ ‘GCC ಗಲ್ಫ್ ಕೂಟಾಯಿಮ’ ಮತ್ತು ಖಿದ್ಮತುಲ್ ಇಸ್ಲಾಂ ವತಿಯಿಂದ ರಮಳಾನ್ ಕಿಟ್ ವಿತರಣೆ

ಮಂಜೆಶ್ವರ: ಕೆದುಂಬಾಡಿ ಪದವು ಖಿದ್ಮತುಲ್ ಇಸ್ಲಾಂ ಮೀಲಾದ್ ಕಮಿಟಿ ಮತ್ತು GCC ಗಲ್ಫ್ ಕೂಟಾಯಿಮ ಇದರ ವತಿಯಿಂದ ಅನಾಥ ನಿರ್ಗತಿಕ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಶುಕ್ರವಾರ ಜುಮಾ ನಂತರ ನಡೆಯಿತು

ಕಾರ್ಯಕ್ರಮದಲ್ಲಿ ಸ್ಥಳೀಯ ಮುದರ್ರೀಸ್ ಸೈಯ್ಯಿದ್ ಯಾಸೀನ್ ಅಲ್ ಹೈದ್ರೂಸಿ ಸಖಾಫಿ ತಂಙಳ್ ಕಾರ್ಯಕ್ರಮವನ್ನು ಕಿಟ್ ನೀಡುವುದರ ಮೂಲಕ ಉದ್ಘಾಟನೆ ಮಾಡಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಬಿಲಾಲ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಕೆ.ಯು. ಅಬ್ದುಲ್ಲಾ ಹಾಜಿ, ಕತಾರ್ ಬಾವ ಹಾಜಿ, ಅಬ್ದುಲ್ ಖಾದರ್ ಹಾಜಿ ತಲೆಕಳ, KIMC ಅಧ್ಯಕ್ಷರಾದ ಸಿದ್ದಿಕ್ ರಾಹತ್, ಕಾರ್ಯದರ್ಶಿ ಇಸ್ಮಾಯಿಲ್ ಕೆ. ಯು, ಅಬ್ದುಲ್ ರೆಹಮಾನ್ ವೆಜ್ ಹಾಗೂ ಊರಿನ ಹಿರಿಯರು ಈ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನಮ್ಮನ್ನು ಸಹಕರಿಸಿದ ದಾನಿಗಳಾದ ಪ್ರವಾಸಿಗಳು ಮತ್ತು ಊರಿನ ಪ್ರತಿಯೊಬ್ಬರಿಗೂ ತಂಙಳ್ ರವರು ಪ್ರತ್ಯೇಕ ದುಆಃ ನಡೆಸಿ ಅಭಿನಂದಿಸಿದರು.