ಶಾರ್ಜಾ: ಮಸ್ಜಿದು ಶಾರ್ಜಾ ಎಂದು ನಾಮಕರಣಗೊಂಡ ಮಸೀದಿಯಲ್ಲಿ ಒಂದೇ ಸಮಯ 25,000 ಮಂದಿಗೆ ನಮಾಝ್ ನಿರ್ವಹಿಸಲು ಸೌಕರ್ಯ ದೊರಕಲಿದೆ. ಉಸ್ಮಾನಿಯಾ(ಒತೋಮನ್) ಶೈಲಿಯಲ್ಲಿ ನಿರ್ಮಿಸಲಾದ ಈ ಮಸೀದಿಯನ್ನು ಸಂದರ್ಶಿಸಲು ಅನ್ಯ ಮತೀಯರಿಗೂ ಅವಕಾಶವನ್ನು ಕಲ್ಪಿಸಲಾಗಿದೆ.
ಎಮಿರೇಟ್ಸ್ ರಸ್ತೆ ಮತ್ತು ಮಲೀಹಾ ರಸ್ತೆಯ ಸಮೀಪ ಅಲ್ತಾಯಿಯಲ್ಲಿ ಶಾರ್ಜಾದ ಅತ್ಯಂತ ದೊಡ್ಡ ಮಸೀದಿಯನ್ನು ನಿರ್ಮಿಸಲಾಗಿದೆ. ಶಾರ್ಜಾದ ಆಡಳಿತಾಧಿಕಾರಿ ಡಾ.ಶೈಖ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಮಸ್ಜಿದು ಶಾರ್ಜಾದ ಉದ್ಘಾಟನೆ ನಿರ್ವಹಿಸಿದರು. ಹೊರಗಿನ ಹೂದೋಟ ಸೇರಿದಂತೆ 186,000 ಚ.ಮೀ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ.
ತುರ್ಕಿಯ ಮಸೀದಿಗಳಾದ ಉಸ್ಮಾನಿಯಾ ಶಿಲ್ಪ ಕಲೆಯನ್ನು ಅನುಕರಿಸಿ, ಈ ಮಸೀದಿಯನ್ನು ನಿರ್ಮಿಸಲಾಗಿದ್ದು, ಪ್ರಧಾನ ಹಾಲ್ನಲ್ಲಿ 5,000 ಮಂದಿಗೆ ನಮಾಝ್ ಮಾಡಬಹುದಾಗಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶ ಇರುವ ಈ ಮಸೀದಿಯಲ್ಲಿ 600 ಮಹಿಳೆರಯರಿಗೆ ಒಂದೇ ಸಮಯ ನಮಾಝ್ ನಿರ್ವಹಿಸಬಹುದು.
ಮಸೀದಿಯ ಇಮಾಂ, ಸಿಬ್ಬಂದಿಯ ಮನೆಗಳು, ಅಂಗಡಿ, ಫುಟ್ ಪಾತ್ ಎಲ್ಲವೂ ಮಸೀದಿಯ ಅಂಗವಾಗಿದೆ. 2014 ರಲ್ಲಿ ಈ ಮಸೀದಿ ನಿರ್ಮಾನಕ್ಕೆ ಆದೇಶ ನೀಡಲಾಗಿತ್ತು. ರಮಝಾನಿನ ಪ್ರಥಮ ಶುಕ್ರವಾರ ರಾತ್ರಿ ತರಾವೀಹ್ ನಮಾಝಿಗೆ ಶಾರ್ಜಾದ ಆಡಳಿತಾಧಿಕಾರಿ ಕೂಡ ಹಾಜರಿದ್ದರು. ಮಸ್ಜಿದು ಶಾರ್ಜಾದ ಉದ್ಘಾಟನೆ ನಿಮಿತ್ತ ಯುಎಇ ಸೆಂಟ್ರಲ್ ಬ್ಯಾಂಕ್ ಎರಡು ನಾಣ್ಯಗಳನ್ನು ಬಿಡುಗಡೆಗೊಳಿಸಿದೆ.
ماشاءالله