ಜಿದ್ದಾ: ಪವಿತ್ರ ಉಮ್ರಾ ಕರ್ಮ ನಿರ್ವಹಣೆಗಾಗಿ ಖತರ್ ನಿಂದ ಆಗಮಿಸುವವರಿಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಹಜ್ ಉಮ್ರಾ ಸಚಿವಾಲಯ ಸಜ್ಜುಗೊಳಿಸಿದೆ.
ಖತರ್ ಸ್ವದೇಶಿಗಳು ಮತ್ತು ಅಲ್ಲಿ ನೆಲೆಸಿರುವ ವಿದೇಶೀಯರು ಉಮ್ರಾ ನಿರ್ವಹಿಸಲು ಪ್ರತ್ಯೇಕವಾಗಿ ಸಜ್ಜಗೊಳಿಸಲಾದ ವೆಬ್ ಪೋರ್ಟಲ್ ಮೂಲಕ ತಮ್ಮ ವಿವರಗಳನ್ನು ನೋಂದಣಿ ಮಾಡಬಹುದಾಗಿದ್ದು, ಆ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹಜ್-ಉಮ್ರಾ ಸಚಿವಾಲಯ ತಿಳಿಸಿದೆ.
ಕತರ್‌ನಲ್ಲಿರುವ ವಿದೇಶೀಯರು ಮುಖಾಂ ಎನ್ನುವ ವೆಬ್ ಪೋರ್ಟಲ್ ಮೂಲಕ ಹೆಸರು ವಿವರಗಳನ್ನು ನೋಂದಾಯಿಸಿ ಉಮ್ರಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅದೇ ಸಮಯ ಉಮ್ರಾ ನಿರ್ವಹಣೆಗಾಗಿ ಸೌದಿ ಅರೇಬಿಯಾಕೆ ತಲುಪುವ ಖತರ್ ಪ್ರಜೆಗಳು ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ ಮದೀನಾದ ಪ್ರಿನ್ಸ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ಮೂಲಕ ಮಾತ್ರ ತಲುಪಬಹುದಾಗಿದೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ.
ಕತರ್ ಪ್ರಜೆಗಳಿಗೆ ಉಮ್ರಾಗೆ ಅರ್ಜಿ ಸಲ್ಲಿಸಲು (https://qataiu.haj.gov.sa) ವೆಬ್ ಪೋರ್ಟಲ್ ಮೂಲಕ ನೋಂದಣಿ ಮಾಡಬಹುದು, ವಿದೇಶೀಯರಯ (https://eservices.haj.gov.sa/eservices3/) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಖತರ್ ಏರ್ವೇಸ್ ಹೊರತುಪಡಿಸಿ, ಸೌದಿಗೆ ತೆರಳುವ ಯಾವುದೇ ವಿಮಾನಗಳ ಮೂಲಕ ಪ್ರಯಾಣ ಬೆಳೆಸಬಹುದು.