janadhvani

Kannada Online News Paper

ಭಯೋತ್ಪಾದಕಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡು-ನಟಿ ಸ್ವರಾ ಭಾಸ್ಕರ್

ನವದೆಹಲಿ: ಮಾಲೆಗಾಂ ಸ್ಪೋಟದಲ್ಲಿ ಆರೋಪಿಯಾಗಿರುವ ಪ್ರಗ್ಯಾಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಭೂಪಾಲ್ ನಲ್ಲಿ ಕಣಕ್ಕೆ ಇಳಿದಿರುವ ವಿಚಾರವಾಗಿ ಬಾಲಿವುಡ್ ನಲ್ಲಿ ನೇರ ನುಡಿಗಳಿಗೆ ಹೆಸರಾಗಿರುವ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸುತ್ತಾ ಪ್ರಗ್ಯಾ ಸಿಂಗ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಹೇಳಿದ್ದಾರೆ.

ಭೂಪಾಲ್ ನಲ್ಲಿ ಪ್ರಗ್ಯಾ ಸಿಂಗ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದರ ಬಗ್ಗೆ ಸ್ವರಾ ಭಾಸ್ಕರ್ ಮಾತನಾಡುತ್ತಾ ” ನಾನು ಈಗಾಗಲೇ ಆಕೆ ಸ್ಪರ್ಧೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಆಕೆಯ ಸ್ಪರ್ಧೆ ನಾಚಿಕೆಗೇಡಿನ ಸಂಗತಿ. ಒಂದು ವೇಳೆ ನೀವು ಭೂಪಾಲ್ ನಲ್ಲಿ ಯಾರು ಉತ್ತಮ ಅಭ್ಯರ್ಥಿ ಎಂದು ಕೇಳಿದರೆ ಅದು ನಿಶ್ಚಿತವಾಗಿ ದಿಗ್ವಿಜಯ ಸಿಂಗ್” ಎಂದರು. ಪ್ರಗ್ಯಾ ಹಿಂದೂ ಎಂದು ಹೇಳಿಕೊಂಡರೆ ಆಕೆ ಭಯೋತ್ಪಾದನೆಯ ಆರೋಪವನ್ನು ಹೊತ್ತಿದ್ದಾಳೆ, ಆದ್ದರಿಂದ ಆಕೆ ಹಿಂದೂ ಭಯೋತ್ಪಾದನೆ ಆರೋಪಿ ಎಂದು ತಿಳಿಸಿದರು.

“ಜನರು ಇಸ್ಲಾಮಿಕ್ ಭಯೋತ್ಪಾಧನೆ ಎಂಬ ಭಾಷೆಯನ್ನು ಬಳಸುತ್ತಾರೆ ಹಾಗೆಯೇ ಹಿಂದೂ ಭಯೋತ್ಪಾಧನೆ ಎಂದೂ ಬಳಸಬೇಕು. ನೀವು ನನ್ನನ್ನು ಕೇಳಿದರೆ ಹಿಂಸೆ, ಅಪರಾಧ, ಭಯೋತ್ಪಾಧನೆ ಪಾಪದ ಸಂಗತಿಗಳು ಅವು ಯಾವ ಧರ್ಮಗಳ ಜನರಿಂದಲೂ ಸಂಭವಿಸಬಹುದು, ಇದನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಯಹೂದಿ ಎಲ್ಲರು ಈ ಹಿಂದೆ ಮಾಡಿದ್ದಾರೆ” ಎಂದು ನಟಿ ಹೇಳಿದರು.

error: Content is protected !! Not allowed copy content from janadhvani.com