ನವದೆಹಲಿ,ಮೇ.5:- ಸೋರಿಕೆಯಾದ ರಕ್ಷಣಾ ಗುಪ್ತ ದಾಖಲೆಗಳ ಪ್ರಕಟಣೆ ಅಪರಾಧವಲ್ಲ ಎನ್ನುವಂತೆ. ಅಪರಾಧ ಕಾನೂನುಗಳಿಗೆ ವಿನಾಯಿತಿ ನೀಡುವುದು. ದೇಶದ ಭದ್ರತೆ ದೃಷ್ಟಿಯಿಂದ ಭಾರಿ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಕೇಂದ್ರ ಸರ್ಕಾರ ಶನಿವಾರ ಸುಪ್ರೀಂ ನ್ಯಾಯಪೀಠವನ್ನು ಎಚ್ಚರಿಸಿದೆ.
ರಫೇಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದ ಸೋರಿಕೆಯಾದ ದಾಖಲೆಗಳನ್ನು ಈ ಪ್ರಕರಣದ ಮರು ಪರಿಶೀಲನೆಗಾಗಿ ಸುಪ್ರೀಂ ನ್ಯಾಯಪೀಠ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಸರ್ಕಾರ ಸುಪ್ರೀಂ ನ್ಯಾಯಪೀಠವನ್ನು ನಯವಾಗಿ ಎಚ್ಚರಿಸಿದೆ.
ರಫೇಲ್ ಕುರಿತಂತೆ ಸೋರಿಕೆಯ ದಾಖಲೆಗಳನ್ನು ಪುರಾವೆಯಾಗಿ ಸ್ವೀಕರಿಸಬಾರದು ಎಂದು ಕೇಂದ್ರ ಸರ್ಕಾರ ಮಂಡಿಸಿದ್ದ ವಾದವನ್ನು ಸುಪ್ರೀಂ ನ್ಯಾಯಪೀಠ ತಿರಸ್ಕರಿಸಿತ್ತು ಮತ್ತು ಆ ದಾಖಲೆಗಳನ್ನು ಮಾನ್ಯ ಮಾಡಿದ್ದ ಪೀಠ ಅವುಗಳ ಆಧಾರದಲ್ಲಿ ಪ್ರಕರಣದ ಪುನರ್ ಪರಿಶೀಲಿಸಿ ರಫೇಲ್ ವ್ಯವಹಾರ ಸರಿ ಇದೆ ಈ ಒಪ್ಪಂದದಲ್ಲಿ ಯಾವುದೇ ಲೋಪ ಆಗಿಲ್ಲ ಎಂದು 2018ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಆದರೆ ಈ ತೀರ್ಪಿನ ಮರು ಪರಿಶೀಲನೆ ನಡೆಸಲು ಕೋರಿ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಮತ್ತು ವಕೀಲ ಪ್ರಶಾಂತ್ ಭೂಷಣ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು ಮತ್ತು ರಫೇಲ್ ವ್ಯವಹಾರ ಕುರಿತ ಸೋರಿಕೆಯಾದ ದಾಖಲೆಗಳನ್ನು ಒದಗಿಸಿದ್ದರು.
ಇದನ್ನು ಸುಪ್ರೀಂ ನ್ಯಾಯಪೀಠ ಮಾನ್ಯ ಮಾಡಿ ಮರು ಪರಿಶೀಲನೆ ನಡೆಸುವುದಾಗಿ ಹೇಳಿದೆ.