ನವದೆಹಲಿ: ಬ್ಯಾಂಕ್ ಮತ್ತು ಸಿಮ್ ಕಾರ್ಡ್ ಖರೀದಿಸುವಾಗ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ತೀರ್ಪು ನೀಡಿದ ನಂತರ ಇದೇ ಮೊದಲ ಬಾರಿಗೆ ಮೊಬೈಲ್ ಸಿಮ್ ಖರೀದಿ ನಿಯಮವು ಬದಲಾಗಿದೆ. ಮೇ. 1 ರಿಂದ ಸಿಮ್ ಖರೀದಿ ನಿಯಮ ಬದಲಾಗಲಿದ್ದು, ಗ್ರಾಹಕರು ಆಧಾರ್ ಕಾರ್ಡ್ ನೀಡದೆ ಸಿಮ್ ಖರೀದಿಸಬಹುದಾಗಿದೆ.
ಸಿಮ್ ಖರೀದಿಸುವ ಗ್ರಾಹಕರಿಗಾಗಿ ಟೆಲಿಕಾಂ ಕಂಪೆನಿಗಳು ಕೆವೈಸಿ (Know Your Customer) ಸಿಸ್ಟಿಂವೊಂದನ್ನು ಜಾರಿಗೆ ತಂದಿದ್ದು, ಈ ಮೂಲಕ ಗಂಟೆಯೊಳಗಡೆ ಗ್ರಾಹಕರ ದಾಖಲೆಯನ್ನು ಪರಿಶೀಲನೆ ನಡೆಸಿ ಸಿಮ್ ನೀಡಲು ಮುಂದಾಗಿದ್ದಾರೆ.
ಇನ್ನು ಹೊಸ ನಿಯಮದ ಪ್ರಕಾರ ಸಿಮ್ಕಾರ್ಡ್ ಖರೀದಿಸುವ ಗ್ರಾಹಕರು ಡಿಜಿಟಲ್ ವೆರಿಫಿಕೇಶನ್ ಮಾಡಬೇಕಾಗುತ್ತದೆ. ನಂತರ 2 ಗಂಟೆ ಒಳಗಡೆ ಸಿಮ್ಕಾರ್ಡ್ ಆ್ಯಕ್ಟಿವೇಷನ್ ಕೂಡ ಆಗುತ್ತದೆ.
ಸಿಮ್ಕಾರ್ಡ್ ಖರೀದಿಸುವ ಗ್ರಾಹಕರು ಡಿಜಿಟಲ್ ಫಾರ್ಮ್ನಲ್ಲಿ ಫೋಟೋ, ಬೆರಳಚ್ಚು ಮತ್ತು ಕೆಲ ದಾಖಲೆಯನ್ನು ತುಂಬಬೇಕು. ekyc (Electronic Know your Customer) ದೃಡೀಕರಣವಾದ ಬಳಿಕ ಸಿಮ್ ಆಕ್ಟಿವೇಟ್ ಆಗುತ್ತದೆ.
ಸಿಮ್ ಖರೀದಿ ನಿಯಮಾನುಸಾರ ಗ್ರಾಹಕ ದೃಢೀಕೃತ ವಿಳಾಸದಲ್ಲಿ ಒಟ್ಟು 9 ಸಿಮ್ ಪಡೆಯುವ ಅವಕಾಶವನ್ನು ನೀಡಲಾಗಿದೆ. ಒಂದು ದಿನದಲ್ಲಿ 2 ಸಿಮ್ ಖರೀದಿ ಮಾಡಬಹುದಾಗಿದೆ.